ಸುಳ್ಯ: ರಾಷ್ಟ್ರೀಯ ಹೆದ್ದಾರಿ ಮಡಿಕೇರಿ-ಸಂಪಾಜೆ ಮಧ್ಯೆ ಜಾರಿ ಮಾಡಲಾಗಿದ್ದ ರಾತ್ರಿ ಸಂಚಾರ ನಿಷೇಧವನ್ನು ಹಿಂಪಡೆಯಲಾಗಿದೆ. ಮದೆನಾಡು ಬಳಿ ಭೂಕುಸಿತ ಉಂಟಾಗಿದ್ದ ಸ್ಥಳಲ್ಲಿ ಶೇ. 75 ರಷ್ಟು ಮಣ್ಣು ತೆರವುಗೊಳಿಸಲಾಗಿದೆ. ಉಳಿಕೆ ಮಣ್ಣಿನ ತೆರವು ಕಾಮಗಾರಿ ಕೈಗೊಳ್ಳಲಾಗಿದ್ದು ಯಾವುದೇ ಸಮಸ್ಯೆ ಕಂಡುಬಂದಿರುವುದಿಲ್ಲ.
ಹೀಗಾಗಿ ಇಂದಿನಿಂದಲೇ ಜಾರಿಗೆ ಬರುವಂತೆ ರಾತ್ರಿ ಕೂಡ ಮಡಿಕೇರಿ–ಸಂಪಾಜೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಮಡಿಕೇರಿ–ಸಂಪಾಜೆ ಹೆದ್ದಾರಿಯಲ್ಲಿ ಹಗಲೂ ರಾತ್ರಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಧವಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದೆ.
Kshetra Samachara
11/08/2022 10:05 pm