ಬಂಟ್ವಾಳ: ರಾಷ್ಟ್ರಧ್ವಜ ಪೂರೈಕೆ ಸಂದರ್ಭ ದೋಷಯುಕ್ತವಾಗಿ ವಿತರಣೆಯಾಗುತ್ತದೆ ಎಂದು ನಾಗರೀಕರು ಅಳಲು ತೋಡಿಕೊಂಡಿದ್ದಾರೆ.
ಅಂಚೆ ಕಚೇರಿಯಲ್ಲಿ ಧ್ವಜ ಖರೀದಿಗೆಂದು ತೆರಳಿದವರಿಗೆ ಅಶೋಕಚಕ್ರ ವಾರೆಯಾಗಿರುವ ಧ್ವಜ ವಿತರಣೆಯಾಗಿದ್ದು, ಅದರ ಗುಣಮಟ್ಟವೂ ಚೆನ್ನಾಗಿಲ್ಲ ಎಂದವರು ದೂರಿದ್ದಾರೆ.
ಇದೇ ವಿಚಾರದ ಕುರಿತು ಪುರಸಭೆಯಲ್ಲಿ ನಡೆದ ಪೂರ್ವತಯಾರಿ ಸಭೆಯಲ್ಲಿ ಸದಸ್ಯರು ಗಮನ ಸೆಳೆದಿದ್ದರು. ಮನೆ ಮನೆಯಲ್ಲಿ ಧ್ವಜ ಹಾರಿಸುವ ವೇಳೆ ಇಂಥದ್ದನ್ನು ಏನು ಮಾಡುವುದು ಎಂದು ಪ್ರಶ್ನಿಸಿರುವ ನಾಗರೀಕರು, ಸರಿಯಾದ ಧ್ವಜ ಪೂರೈಕೆ ಮಾಡುವಂತೆ ಒತ್ತಾಯಿಸಿದ್ದಾರೆ.
Kshetra Samachara
10/08/2022 10:02 pm