ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಜಿಲ್ಲಾಡಳಿತ, ಸರಕಾರದಿಂದ ನಿರ್ಲಕ್ಷ್ಯ; ಸಹಸ್ರಾರು ಮೀನುಗಾರರಿಂದ ಪ್ರತಿಭಟನೆ, ಆಕ್ರೋಶ

ಬೈಂದೂರು: ಹಲವು ಬೇಡಿಕೆಗಳನ್ನು ಮುಂದಿಟ್ಟು ಇವತ್ತು ಉಪ್ಪುಂದ ಮತ್ತು ಬೈಂದೂರು ಭಾಗದ ಸಾವಿರಾರು ಮೀನುಗಾರರು ಪ್ರತಿಭಟನೆ ನಡೆಸಿದರು.

ಮುಖ್ಯವಾಗಿ ಬೈಂದೂರು- ಉಪ್ಪುಂದ ವ್ಯಾಪ್ತಿಯ ಹಲವು ದೋಣಿಗಳು ಮತ್ತು ಸೊತ್ತುಗಳು ಮೊನ್ನೆಯ ಮಹಾಮಳೆಯಿಂದ ಹಾನಿಗೊಳಗಾಗಿವೆ. 3000ಕ್ಕೂ ಮಿಕ್ಕಿ ಮೀನುಗಾರರು ಹಾಗೂ ಸ್ಥಳೀಯರು, ಮೀನುಗಾರಿಕೆ ದೋಣಿ ಮತ್ತು ಸೊತ್ತುಗಳನ್ನು ರಕ್ಷಣೆ ಮಾಡಲು ಹೋರಾಡುತ್ತಿದ್ದರೂ ಸರಕಾರ, ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತ ನಮಗೆ ಯಾವುದೇ ಸಹಕಾರ ನೀಡಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಮೊನ್ನೆಯ ಭಾರೀ ಮಳೆ/ಪ್ರಾಕೃತಿಕ ವಿಕೋಪದಿಂದ ಅಂದಾಜು 45 ದೋಣಿ, ಇಂಜಿನ್, ಬಲೆ, ಮತ್ತಿತರ ಮೀನುಗಾರಿಕೆ ಸಲಕರಣೆಗಳಿಗೆ ಹಾನಿಯುಂಟಾಗಿದೆ. ಇದರಿಂದ ಮೂರು ಕೋಟಿಗೂ ಮಿಕ್ಕಿ ನಷ್ಟವಾಗಿದೆ. ಆದರೆ, ಸರಕಾರ ನಮ್ಮ ನೆರವಿಗೆ ಬಂದಿಲ್ಲ ಎಂದು ಮೀನುಗಾರರು ಅಸಮಾಧಾನ ಹೊರ ಹಾಕಿದರು.

ಇನ್ನು, ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಕಿರುಬಂದರನ್ನು ಮೀನುಗಾರರ ಅನುಕೂಲಕ್ಕಾಗಿ ನಿರ್ಮಿಸುತ್ತಿದ್ದು, ಕಾಮಗಾರಿ ಈ ತನಕ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳದೇ ವೈಜ್ಞಾನಿಕವಾಗಿ ನಡೆಯದೇ ಇರುವುದರಿಂದ, ಈ ಬಂದರಿನಲ್ಲಿ 4 ಮಂದಿ ಮೀನುಗಾರರು ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ರೂ. ಮೀನುಗಾರಿಕೆ ಸೊತ್ತುಗಳು ನಷ್ಟವಾಗಿದೆ. ಸರಕಾರ ನಮ್ಮ ಸಮಸ್ಯೆಗಳನ್ನು ಈಡೇರಿಸದಿದ್ದರೆ ಮುಂದೆ ಇನ್ನೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

05/08/2022 04:16 pm

Cinque Terre

3.98 K

Cinque Terre

0

ಸಂಬಂಧಿತ ಸುದ್ದಿ