ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅವ್ಯವಸ್ಥೆಯ ಆಗರವಾದ ಮುಲ್ಕಿ ರೈಲ್ವೆ ನಿಲ್ದಾಣದ ರಸ್ತೆ

ಮುಲ್ಕಿ: ಕೇಂದ್ರ ಸರಕಾರದ ಅಧೀನದಲ್ಲಿರುವ ಮುಲ್ಕಿ ರೈಲ್ವೆ ನಿಲ್ದಾಣದ ರಸ್ತೆ ಅವ್ಯವಸ್ಥೆಗಳ ಆಧಾರವಾಗಿದ್ದು ದುರಸ್ತಿ ಕಾಣದೇ ಹಲವಾರು ವರ್ಷಗಳು ಕಳೆದಿವೆ.

ಮುಲ್ಕಿ ರೈಲ್ವೆ ನಿಲ್ದಾಣ ಅಸ್ತಿತ್ವಕ್ಕೆ ಬಂದ ಬಳಿಕ ಡಾಮರು ಕಾಣದೆ ಕಂಗಾಲಾಗಿರುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.

ದೂರದ ಮುಂಬೈಗೆ ಮುಲ್ಕಿ, ಕಟೀಲು ಮೂಡಬಿದ್ರೆ ಕಾರ್ಕಳ ಬೆಳ್ಮಣ್, ಮುದರಂಗಡಿ, ಕಡೆಯಿಂದ ಓಡಾಡುವ ಪ್ರಯಾಣಿಕರು ಹೊಂಡ, ಗುಂಡಿಗಳಿಂದ ತುಂಬಿರುವ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸಂಚರಿಸುತ್ತಾ ಹಿಡಿಶಾಪ ಹಾಕುತ್ತಿದ್ದಾರೆ.

ನಿಲ್ದಾಣದ ರಸ್ತೆ ಅವ್ಯವಸ್ಥೆ ಬಗ್ಗೆ ಕಳೆದ ದಿನಗಳ ಹಿಂದೆ ರೈಲ್ವೆ ಇಲಾಖೆ ಮನಗಂಡು ಚರಂಡಿ ವ್ಯವಸ್ಥೆ ಕಲ್ಪಿಸಿದ್ದು ಚರಂಡಿಯಿಂದ ತೆಗೆದ ತ್ಯಾಜ್ಯ ಮಣ್ಣನ್ನು ರಸ್ತೆ ಬದಿಯಲ್ಲಿ ಹಾಕಿ ಮತ್ತಷ್ಟು ಸಂಚಾರ ದುಸ್ತರವಾಗಿದೆ.

ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ರೈಲು ಇಳಿದು ಪ್ರಯಾಣಿಕರು ರೈಲ್ವೇ ಹಳಿಯಲ್ಲಿ ದಾಟುತ್ತಿದ್ದು ಸೂಕ್ತ ಮೇಲ್ಸೇತುವೆಯ ಅವಶ್ಯಕತೆ ಇದೆ. ಕೂಡಲೇ ರೈಲ್ವೆ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

26/07/2022 07:57 pm

Cinque Terre

17.48 K

Cinque Terre

0