ಪರ್ಕಳ: ಉಡುಪಿಯೆಲ್ಲೆಡೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ,ವಾಹನ ಸವಾರರ ತಾಳ್ಮೆಯನ್ನು ಪರೀಕ್ಷಿಸುತ್ತವೆ.ಅದರಲ್ಲೂ ಮಣಿಪಾಲ ಸಮೀಪದ ಪರ್ಕಳ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ಅಪಘಾತಗಳು ಸಂಭವಿಸುವುದಲ್ಲದೆ ,ಟ್ರಾಫಿಕ್ ಜಾಮ್ ಆಗಿ ಪರಿಸರದ ಜನರು ತೀವ್ರ ಕಷ್ಟಪಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಜನಪರ ವೈದ್ಯ ,ಹೋರಾಟಗಾರ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ನಾಳೆ (ಜು.24) ಪರ್ಕಳದ ಗೋಪಾಲಕೃಷ್ಣ ದೇವಸ್ಥಾನದೆದುರು ಧರಣಿ ಹಮ್ಮಿಕೊಳ್ಳಲಾಗಿದೆ.ಸಮಾನ ಮನಸ್ಕರು,ಸ್ಥಳೀಯರು ಮತ್ತು ವಾಹನ ಸವಾರರು ಧರಣಿಗೆ ಬೆಂಬಲ ಸೂಚಿಸಿದ್ದಾರೆ.
Kshetra Samachara
23/07/2022 11:19 am