ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂದು ಸಸಿಹಿತ್ಲು ಸಂಪರ್ಕ ರಸ್ತೆ ಬಿರುಕು ಬಿಟ್ಟಿದ್ದು ನಂದಿನಿ ನದಿ ಪಾಲಾಗುವ ಭೀತಿಯಲ್ಲಿದೆ.
ಸಸಿಹಿತ್ಲು ಕಡೆಗೆ ಈ ರಸ್ತೆ ಪ್ರಧಾನ ಸಂಪರ್ಕ ರಸ್ತೆಯಾಗಿದ್ದು ಸೂಕ್ತ ತಡೆಗೋಡೆ ಇಲ್ಲದೆ ರಸ್ತೆ ಕುಸಿತದ ಭೀತಿ ಎದುರಿಸುತ್ತಿದ್ದು ರಸ್ತೆ ಸಂಚಾರ ಅವಲಂಬಿಸಿರುವ ಸ್ಥಳೀಯ ನಾಗರಿಕರು ಆತಂಕದ ಸ್ಥಿತಿಯಲ್ಲಿದ್ದಾರೆ.
ರಸ್ತೆ ಅವ್ಯವಸ್ಥೆ ಹಾಗೂ ತಡೆಗೋಡೆಯ ಬಗ್ಗೆ ಅನೇಕ ಬಾರಿ ಸ್ಥಳೀಯ ಪಂಚಾಯತಿಗೆ ಹಾಗೂ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಗಣೇಶ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ರಸ್ತೆಗೆ ಅನೇಕ ಗಿಡಗಂಟಿಗಳು ಆವರಿಸಿ ಸಂಚಾರ ದುಸ್ತರವಾಗಿದ್ದು ರಸ್ತೆಯ ನಾಮಫಲಕವೂ ಕೂಡ ಕಣ್ಮರೆಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಿರುಕು ಬಿಟ್ಟ ರಸ್ತೆಯನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಪಡಿಸಿ ನಂದಿನಿ ನದಿಗೆ ತಡೆಗೋಡೆ ನಿರ್ಮಿಸಿ ಮುಂದೆ ಆಗಬಹುದಾದ ಅನಾಹುತಕ್ಕೆ ಬ್ರೇಕ್ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Kshetra Samachara
13/07/2022 03:22 pm