ಮಂಗಳೂರು: ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವಿವಿಧ ಪ್ರಾಯೋಜಕರಿಂದ ಪ್ರಾಯೋಜಿಸಲ್ಪಟ್ಟ ಸುಮಾರು 20 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಶಾಸಕ ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು. ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಪ್ರಾಯೋಜಿತ ವೀಡಿಯೋ ಕಾನ್ಫರೆನ್ಸ್ ಹಾಲ್, ಡಾ.ಕುಸುಮಾಕರ್ ಸೂಡ ಅವರಿಂದ ಅನುದಾನಗೊಂಡ ಡಾ.ಸೂಡ ವೈದ್ಯಕೀಯ ಶಿಕ್ಷಣ ಹಾಲ್ ಹಾಗೂ ಅತಿಗಣ್ಯರ ಸಮಾಲೋಚನಾ ಕೊಠಡಿಗಳು ಲೋಕಾರ್ಪಣೆಗೊಂಡಿತು.
ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸರಕಾರಿ ಲೇಡಿಗೋಶನ್ ಆಸ್ಪತ್ರೆಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ತಾಯಿ ಮಕ್ಕಳ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಸೇವೆಯನ್ನು ನೀಡುತ್ತಾ ಬಂದಿದೆ. ಲಯನ್ಸ್ ನಂತಹ ಸೇವಾ ಸಂಸ್ಥೆಗಳು ತಮ್ಮ ಅನುದಾನದಿಂದ ಇಂತಹ ವಿಶಿಷ್ಟ ಸೇವಾ ಕಾರ್ಯವಾದಂತಹ ವೀಡಿಯೋ ಕಾನ್ಫರೆನ್ಸ್ ಹಾಲ್ ನ್ನು ಪ್ರಾಯೋಜಿಸಿರುವುದು ಶ್ಲಾಘನೀಯ ಎಂದರು.
ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ. ಆರ್. ಮಾತನಾಡಿ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೊಂದ ಮಹಿಳೆಯರ ಆಶಾಕಿರಣ 'ಸಖಿ' ಒನ್ ಸ್ಟಾಪ್ ಸೆಂಟರ್ ನ ಫಲಾನುಭವಿಗಳಿಗೆ ಕೋರ್ಟ್ ಕಲಾಪಗಳಿಗೆ ಆಸ್ಪತ್ರೆಯ ಸಖಿ ಕೇಂದ್ರದಿಂದಲೇ ಹಾಜರಾಗಲು ವೀಡಿಯೋ ಕಾನ್ಫರೆನ್ಸ್ ಹಾಲ್ ಬಹುದೊಡ್ಡ ವರದಾನವಾಗಿದೆ.
ಈ ಸಂದರ್ಭ 'ಸಖಿ' ಒನ್ ಸ್ಟಾಪ್ ಸೆಂಟರ್ ಬಗ್ಗೆ ಸಖಿ ಸೆಂಟರ್ ಹಾಗೂ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಸಾಕ್ಷ್ಯ ಬಿಡುಗಡೆಗೊಳಿಸಲಾಯಿತು.
Kshetra Samachara
07/07/2022 03:15 pm