ಕಾಪು : ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಿಂದ ಕುಂದಾಪುರದವರೆಗಿನ ಚತುಷ್ಪಥ ಯೋಜನೆ ಪ್ರಾರಂಭಗೊಂಡು ದಶಕಗಳು ಸಾಗುತ್ತ ಬಂದರು ಕಾಮಗಾರಿ ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಹೆದ್ದಾರಿ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳಿಂದ ಜನ ರೋಸಿಹೋಗಿದ್ದಾರೆ.
ಮಳೆ ಆರಂಭಗೊಂಡು ಕೆಲವು ದಿನಗಳಷ್ಟೇ ಕಳೆದಿವೆ. ಹೆದ್ದಾರಿ ದಾರಿಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳ ದರ್ಶನ ಆರಂಭಗೊಂಡಿದೆ. ಉಚ್ಚಿಲ, ಕಾಪು, ಕಟಪಾಡಿ, ಪಾಂಗಳ ಪರಿಸರದಲ್ಲಿ ಅಲ್ಲಲ್ಲಿ ದೊಡ್ಡ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು ಹೆದ್ದಾರಿ ಸಂಚಾರಿಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ವಾಹನ ಸಂಚರಿಸಬೇಕಾಗಿದ್ದು ಕೊಂಚ ಯಾಮಾರಿದ್ರು ಅಪಾಯ ಕಟ್ಟಿಟ್ಟ ಬುತ್ತಿ.
ಉಚ್ಚಿಲ, ಮೂಳೂರು ಬಳಿ ಸರ್ವಿಸ್ ರಸ್ತೆಯ ಅರೆ ಬರೆ ಕಾಮಗಾರಿಯಿಂದಲೂ ಮನೆಗಳು, ಅಂಗಡಿಗಳು ಜಲಾವೃತಗೊಳ್ಳುವಂತಾಗಿದೆ. ಒಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಎಚ್ಚರ ವಹಿಸಬೇಕಾಗಿದೆ.
Kshetra Samachara
05/07/2022 05:25 pm