ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಸುಸಜ್ಜಿತ ಶೌಚಾಲಯ ಲೋಕಾರ್ಪಣೆ!

ಉಳ್ಳಾಲ: ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಉಳ್ಳಾಲ ನಗರಸಭೆ ಅನುದಾನದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ನೂತನ ಶೌಚಾಲಯವನ್ನು ಶಾಸಕ ಯು.ಟಿ ಖಾದರ್ ಇಂದು ಲೋಕಾರ್ಪಣೆ ಮಾಡಿದರು.

ತೊಕ್ಕೊಟ್ಟಿನ ಕೇಂದ್ರ ಬಸ್ಸು ನಿಲ್ದಾಣದ ನಗರಸಭೆಯ ವಾಣಿಜ್ಯ ಕಟ್ಟಡದಲ್ಲಿ ಇರುವ ಸಾರ್ವಜನಿಕ ಶೌಚಾಲಯವು ಸಮರ್ಪಕ ನಿರ್ವಹಣೆ ಇಲ್ಲದೆ ಜನಸಾಮಾನ್ಯರ ಉಪಯೋಗಕ್ಕೆ ಬರದಂತಾಗಿತ್ತು.ಇದನ್ನ‌ ಮನಗಂಡ ಉಳ್ಳಾಲ ನಗರಸಭೆಯು ಬಸ್ಸು ನಿಲ್ದಾಣದಲ್ಲೇ ಸುಸಜ್ಜಿತವಾದ ನೂತನ ಶೌಚಾಲಯವನ್ನ ನಿರ್ಮಿಸಿದೆ.ಈಗ ನಿರ್ಮಾಣಗೊಂಡ ಶೌಚಾಲಯವು ಪುರುಷರಲ್ಲದೆ,ಮಹಿಳೆಯರೂ ಬಳಸಬಹುದಾದಷ್ಟು ಸೌಕರ್ಯಗಳನ್ನ ಒಳಗೊಂಡಿದೆ.

ಶಾಸಕ ಯು.ಟಿ ಖಾದರ್ ಮಾತನಾಡಿ ಸಾರ್ವಜನಿಕ ಶೌಚಾಲಯದ ನಿರ್ವಹಣೆ ಬಹಳ ಕಷ್ಟಕರ.ನೂತನ ಶೌಚಾಲಯದ ನಿರ್ವಹಣೆಗೆ ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ.ಸಾರ್ವಜನಿಕರು‌ ತಮ್ಮದೇ ಮನೆಯ ಶೌಚಾಲಯವೆಂದು ಭಾವಿಸಿ ಬಳಕೆ ಮಾಡಿದರೆ ಸ್ವಚ್ಛತೆಯನ್ನ ಕಾಪಾಡಬಹುದು.ಸಿಬ್ಬಂದಿಗಳು‌ ಶೌಚಾಲಯದ ಸಮರ್ಪಕ ನಿರ್ವಹಣೆ ಮಾಡದಿದ್ದಲ್ಲಿ ಜನಸಾಮಾನ್ಯರು ನೇರವಾಗಿ ನಗರಸಭೆ ಆಡಳಿತಕ್ಕೆ ದೂರು ನೀಡಬೇಕೆಂದು ಹೇಳಿದರು.

ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ,ಉಪಾಧ್ಯಕ್ಷ ಆಯುಬ್ ಮಂಚಿಲ,ಪೌರಾಯುಕ್ತರಾದ ವಿದ್ಯಾ ಕಾಳೆ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ,ಸ್ಥಳೀಯ ಕೌನ್ಸಿಲರ್ ರಾಜೇಶ್ ಯು.ಬಿ, ಮೊದಲಾದವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

02/07/2022 03:36 pm

Cinque Terre

4.01 K

Cinque Terre

0