ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆ ಅಧ್ಯಕ್ಷೆ ವಾರ್ಡ್ ನಲ್ಲೇ ಕಂಬಳ ಗದ್ದೆಯಾದ ರಸ್ತೆ; ನಾಳೆ ಸ್ಥಳೀಯರಿಂದ ಪ್ರತಿಭಟನೆ

ಮಣಿಪಾಲ: ಉಡುಪಿ ನಗರಸಭೆಯ ಪರ್ಕಳ ವ್ಯಾಪ್ತಿಯ ನಗರಸಭೆ ಅಧ್ಯಕ್ಷೆಯ ವಾರ್ಡಿನಲ್ಲೇ ರಸ್ತೆ ಕಂಬಳ ಗದ್ದೆಯಂತಾಗಿದ್ದು, ನಾಳೆ ಸ್ಥಳೀಯರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಹಿಂದೆ ಇದ್ದ ಈ ರಸ್ತೆಯನ್ನು ಕಾಮಗಾರಿ ನೆಪದಲ್ಲಿ ಸಂಪೂರ್ಣ ಹಾಳು ಮಾಡಲಾಗಿದೆ. ಇದೀಗ ನಿರಂತರ ಮಳೆ ಬರುತ್ತಿದ್ದು, ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಸ್ಥಳೀಯರು ಓಡಾಡಲು ಸಾಧ್ಯವೇ ಇಲ್ಲ.

ವಾಹನ ಸವಾರರು ಮತ್ತು ಶಾಲಾ ವಿದ್ಯಾರ್ಥಿಗಳ ಪಾಡು ಹೇಳತೀರದು. ಹೊಸ ರಸ್ತೆ ಕಾಮಗಾರಿಗಾಗಿ ಇಲ್ಲಿ ಇದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದೊಂದು ರಸ್ತೆ ಎಂಬ ಯಾವ ಕುರುಹೂ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಮಾನ ಮನಸ್ಕರು ಸೇರಿ ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಜುಲೈ 2ರಂದು ಪರ್ಕಳದ ಬಿಎಸ್ಎನ್ಎಲ್ ಕಚೇರಿ ಯಿಂದ ಆರಂಭಗೊಂಡು ಶ್ರೀರಾಮ ಭಜನಾ ಮಂಡಳಿ ತನಕ ಪ್ರತಿಭಟನೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ನಗರಸಭೆ ಅಧ್ಯಕ್ಷರ ಗಮನ ಸೆಳೆಯಲಾಗುವುದು ಎಂದು ಸ್ಥಳೀಯ ಹೋರಾಟಗಾರ ಗಣೇಶ್ ರಾಜ್ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

01/07/2022 08:23 pm

Cinque Terre

5.58 K

Cinque Terre

2

ಸಂಬಂಧಿತ ಸುದ್ದಿ