ಮಲ್ಪೆ: ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆಯಡಿ 2022-22ನೇ ಸಾಲಿನಲ್ಲಿ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿಯ 4 ಫಲಾನುಭವಿಗಳಿಗೆ ಇವತ್ತು ದೋಣಿ ಮತ್ತು ಸಲಕರಣೆ ವಿತರಿಸಲಾಯಿತು. ತಲಾ 3,60,000/- ರಂತೆ ಒಟ್ಟು ರೂ. 14,40,000/- ವೆಚ್ಚದಲ್ಲಿ ಎಫ್.ಆರ್.ಪಿ ದೋಣಿ, ಇಂಜಿನ್, ಬಲೆ, ಸಲಕರಣೆ, ಲೈಪ್ ಬಾಯ್, ಲೈಫ್ ಜಾಕೆಟ್ ಹಾಗೂ ಐಸ್ ಬಾಕ್ಸ್ ಗಳನ್ನು ಶಾಸಕ ಕೆ. ರಘುಪತಿ ಭಟ್ ಫಲಾನುಭವಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.*
Kshetra Samachara
22/06/2022 01:48 pm