ಬಜಪೆ: ಕೈಕಂಬ- ಬಜಪೆ ರಾಜ್ಯ ಹೆದ್ದಾರಿಯ ಪುಚ್ಚಾಳ ಎಂಬಲ್ಲಿನ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಬೃಹತ್ ಗಾತ್ರದ ಹೊಂಡವೊಂದು ಬಾಯ್ತೆರೆದು ನಿಂತಿದೆ. ಕಳೆದ ಕಲವು ತಿಂಗಳುಗಳಿಂದ ಹೊಂಡದ ಸಮೀಪದ ರಸ್ತೆಯ ಅಂಚುಗಳು ಕೂಡ ಕುಸಿದಿದ್ದು, ಅಂಚುಗಳು ಕುಸಿದ ಬಳಿಯೇ ಬೃಹತ್ ಗಾತ್ರದ ಹೊಂಡ ಕೂಡ ನಿರ್ಮಾಣವಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ.
ರಸ್ತೆಯ ತಿರುವಿನಲ್ಲಿರುವ ಈ ಅಪಾಯಕಾರಿ ಹೊಂಡದಿಂದಾಗಿ ದಿನಂಪ್ರತಿ ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಂತಿದೆ. ರಾಜ್ಯ ಹೆದ್ದಾರಿಯ ಅಂಚಿನಲ್ಲಿನ ಉಂಟಾದ ಹೊಂಡದ ಬಳಿ ಯಾವುದೇ ಎಚ್ಚರಿಕೆ ಫಲಕವಾಗಲಿ, ತಡೆ ಬೇಲಿಯನ್ನಾಗಲಿ ಇದುವರೆಗೂ ಸಂಬಂಧಪಟ್ಟ ರಾಜ್ಯ ಹೆದ್ದಾರಿ ಇಲಾಖೆಯಾಗಲಿ ಆಳವಡಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೇವಲ ಒಂದು ಬ್ಯಾರಿಕೇಡ್‌ನ್ನು ಕೆಲ ತಿಂಗಳುಗಳ ಹಿಂದೆ ಅಪಾಯಕಾರಿ ಹೊಂಡದ ಸಮೀಪ ಇಟ್ಟಿದ್ದರು. ಆ ಬ್ಯಾರಿಕೇಡ್ ಮಾತ್ರ ಹೊಂಡದಲ್ಲಿ ಇದ್ದು, ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯರು.
Kshetra Samachara
19/06/2022 05:16 pm