ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೌರ ಕಾರ್ಮಿಕರಿಗೆ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮ ಮನೆ ನಿರ್ಮಾಣ; ಮನಪಾ ತೆರವು ಕಾರ್ಯಾಚರಣೆಗೆ ಕಾರ್ಪೊರೇಟರ್ ವಿರೋಧ

ಮಂಗಳೂರು: ನಗರದ ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಆರೋಪದಲ್ಲಿ ಇಂದು ಮಂಗಳೂರು ಮನಪಾ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದೆ. ಇದನ್ನು ಸ್ಥಳೀಯ ಕಾರ್ಪೊರೇಟರ್ ವಿರೋಧಿಸಿದ್ದು, ಈ ಸಂದರ್ಭ ಸ್ಥಳದಲ್ಲಿ ವಾಗ್ವಾದ ಘಟನೆ ನಡೆದಿದೆ.

ಪೌರ ಕಾರ್ಮಿಕರಿಗೆ ಪಚ್ಚನಾಡಿ ಬಳಿ 4 ಎಕರೆ ನಿವೇಶನವನ್ನು ಮೀಸಲಿಡಲಾಗಿತ್ತು. ಆದರೆ ಈ ಸ್ಥಳದಲ್ಲಿ ಅಕ್ರಮವಾಗಿ 25 ಕ್ಕೂ ಅಧಿಕ ಮನೆಗಳು ಈಗಾಗಲೇ ನಿರ್ಮಾಣಗೊಂಡಿದೆ. ಇದೀಗ ಮತ್ತೆ ಮನೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನಪಾ ಅಧಿಕಾರಿಗಳು ಜೆಸಿಬಿ ಮೂಲಕ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ತೆರವು ಕಾರ್ಯಾಚರಣೆ ಮುಂದಾಗಿದ್ದಾರೆ.

ಸ್ಥಳಕ್ಕೆ ಬಂದ ಸ್ಥಳೀಯ ಮನಪಾ ಸದಸ್ಯೆ ಸಂಗೀತಾ ಆರ್. ನಾಯಕ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕೇವಲ ಒಂದು ಮನೆ ಮಾತ್ರ ಅಕ್ರಮವಾಗಿ ನಿರ್ಮಾಣವಾಗುತ್ತಿಲ್ಲ.

ಈಗಾಗಲೇ 25ಕ್ಕೂ ಅಧಿಕ ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದೆ. ಒಂದು ಮನೆಯ ವಿರುದ್ಧ ಕಾರ್ಯಾಚರಣೆ ನಡೆಸೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ದಲಿತ ಸಂಘಟನೆ ಹಾಗೂ ಮನಪಾ ಸದಸ್ಯೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮನಪಾ ಅಧಿಕಾರಿಗಳು ಮರಳಿದ್ದಾರೆ.

Edited By : Manjunath H D
Kshetra Samachara

Kshetra Samachara

11/06/2022 04:06 pm

Cinque Terre

7.28 K

Cinque Terre

0