ಉಡುಪಿ: ಉಡುಪಿ ಸಮೀಪದ ಪರ್ಕಳ ಸರಳಬೆಟ್ಟು ಈಶ್ವರ ನಗರ ಸಂಪರ್ಕಿಸುವ ರಸ್ತೆ ಈ ಹಿಂದೆ ಹಾಳಾಗಿತ್ತು. ಇದೀಗ ರಸ್ತೆಯ ದುರಸ್ತಿಗೆ ಉಡುಪಿಯ ನಗರಸಭೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿದೆ. ಆದರೆ ಕಾಮಗಾರಿ ವಿಳಂಬದಿಂದಾಗಿ ವಾಹನ ಸವಾರರು ಸಾಕಷ್ಟು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ.
ಒಂದೆಡೆ ಮುಂಗಾರು ಮಳೆ ಬರುವ ಸಾಧ್ಯತೆ ಇರುವುದರಿಂದ ವಾಹನ ಸವಾರರಿಗೆ ಪಾದಚಾರಿಗಳಿಗೆ ಹಾಗೂ ಬೆಳಗಿನ ಹೊತ್ತು ಶಾಲಾ-ಕಾಲೇಜಿಗೆ ಸಾಗುವ ಬಸ್ಸಿಗೆ ಕೂಡ ಮುಂದೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಈ ರಸ್ತೆಯನ್ನು ದುರಸ್ತಿ ಮಾಡುವುದರ ಜೊತೆಗೆ ಕಾಮಗಾರಿಯನ್ನು ಅತಿ ಶೀಘ್ರ ಮುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
04/06/2022 08:27 pm