ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ - ಪವಿತ್ರ ನದಿ ಮಲಿನ!

ವರದಿ: ರಹೀಂ ಉಜಿರೆ

ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು.ಆದರೆ ಇಲ್ಲಿಗೆ ಬರುವ ಭಕ್ತರ ಭಾವನೆಗಳೊಂದಿಗೆ ಆಡಳಿತ ಯಂತ್ರ ಚೆಲ್ಲಾಟವಾಡುತ್ತಿದೆ. ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋಗುವ ಮೊದಲು ಅಲ್ಲಿ ಹರಿಯುವ ನದಿಯಲ್ಲಿ ಮಿಂದು ಹೋಗುವುದು ಸಂಪ್ರದಾಯ. ಆದರೆ ತಾಯಿ ಮುಕಾಂಬಿಕೆ ಸುತ್ತಲೂ ಹರಿಯುವ ಪುಣ್ಯನದಿ ಕೊಳಚೆ ಗುಂಡಿಯಾಗಿದೆ.

ಕೊಲ್ಲೂರು ಕ್ಷೇತ್ರದಲ್ಲಿ ಒಳಚರಂಡಿ ಯೋಜನೆಯ ಅಸಮರ್ಪಕ ನಿರ್ವಹಣೆಯಿಂದಾಗಿ ದೇವಳದ ಪರಿಸರ ಗಬ್ಬೆದ್ದು ಹೋಗಿದೆ. ಮುಕಾಂಬಿಕೆಯ ದರ್ಶನಕ್ಕೆ ಮೊದಲು ಪುಣ್ಯಸ್ನಾನ ಕೈಗೊಳ್ಳೋಣವೆಂದರೆ ಶುದ್ಧ ನೀರೇ ಹರಿಯುವುದಿಲ್ಲ. ಕೊಡಚಾದ್ರಿ ಬೆಟ್ಟದ ತಪ್ಪಲಲ್ಲಿ ಇದ್ದರೂ, ಸಾವಿರಾರು ಬಗೆಯ ಗಿಡಮೂಲಿಕೆಗಳ ಮೂಲಕ ನೀರು ಹರಿದು ಬಂದರೂ, ಕಟ್ಟಡಗಳಿಂದ ಹೊರಬಂದ ಕೊಳಕು ನೀರಿನೊಂದಿಗೆ ಬೆರೆತು ಕಲುಷಿತಗೊಂಡಿದೆ.

ಕೊಲ್ಲೂರಿನಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ವಸತಿಗೃಹಗಳು ತಲೆಯೆತ್ತಿವೆ. ಕ್ಷೇತ್ರಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿರುವುದರಿಂದ ಈ ರೀತಿಯ ಅಭಿವೃದ್ಧಿ ಕಾರ್ಯಗಳು ಅನಿವಾರ್ಯವೇನೋ ಹೌದು. ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಂಡು ಒಳಚರಂಡಿ ವ್ಯವಸ್ಥೆ ಮಾತ್ರ ಇಲ್ಲಿ ರೂಪುಗೊಂಡಿಲ್ಲ. ಕಾಶಿ ತೀರ್ಥವಂತೂ ಸಂಪೂರ್ಣ ಹಾಳಾಗಿದ್ದು ಲಾಡ್ಜ್ ಗಳಿಂದ ಹರಿದು ಬರುವ ಕೊಳಚೆ ನೀರಿನಿಂದ ಮಲಿನವಾಗಿ ಬಿಟ್ಟಿದೆ. ಈ ಕೊಳಚೆ ನೀರಿನಲ್ಲಿ ಕಾಲು ತಿಳಿದುಕೊಂಡೇ ಕ್ಷೇತ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಕೆಲವೊಂದು ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು ಅಲ್ಲಲ್ಲಿ ಕೊಳಚೆನೀರು ಹರಿದು ಬರುತ್ತಿವೆ.

ಸಂಬಂಧಪಟ್ಟವರು ಇನ್ನಾದರೂ ಇತ್ತ ಕಡೆ ಗಮನ ಹರಿಸಬೇಕಿದೆ.

Edited By : Shivu K
Kshetra Samachara

Kshetra Samachara

04/06/2022 05:55 pm

Cinque Terre

7.94 K

Cinque Terre

0

ಸಂಬಂಧಿತ ಸುದ್ದಿ