ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೆದ್ದಾರಿ ಕಾಮಗಾರಿ ವಿಳಂಬ, ಮನೆ ಕಟ್ಟುವವರ ಕಷ್ಟ: ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ!

ಉಡುಪಿ: ಉಡುಪಿ ನಗರಸಭೆ ಸಾಮಾನ್ಯ ಸಭೆ ಇವತ್ತು ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ‌ ನಗರಸಭೆ ವ್ಯಾಪ್ತಿಯ ಹೆದ್ದಾರಿ ಕಾಮಗಾರಿ ವಿಳಂಬ, ಮಳೆ ಅವಾಂತರ, ಮನೆ ನಿರ್ಮಾಣ ಸಂದರ್ಭ ಎದುರಾಗುವ ಸಮಸ್ಯೆಗಳ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.

ಉಡುಪಿ ನಗರದಲ್ಲಿ ಮನೆ ನಿರ್ಮಾಣಕ್ಕೆ ತಂದ ಕಲ್ಲುಗಳು ಕರಗಿ ಹೋಗುತ್ತಿವೆ, ಮರಳು ಮಳೆನೀರಲ್ಲಿ ಕೊಚ್ಚಿ ಹೋಗುತ್ತಿದೆ. ಮನೆ ಕಟ್ಟಲು ಬೇಕಾದ ಅನುಮತಿ 3 ತಿಂಗಳಾದರೂ ಸಿಗುವುದೇ ಇಲ್ಲ. ಜನ ನಮಗೆ ಕೇಳುತ್ತಿದ್ದಾರೆ. ನಮಗೂ ಏನೂ ಮಾಡಲಾಗುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಕೃಷ್ಣ ಕೊಡಂಚ ತಮ್ಮ ಅಸಹಾಯಕತೆ ತೋಡಿಕೊಂಡರು.

ಇನ್ನು ವಿಳಂಬ ಆಗುತ್ತಿರುವ ಪರ್ಕಳ ರಸ್ತೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಭೂ-ಸ್ವಾಧೀನ ಪಕ್ರಿಯೆಯಲ್ಲಿ ನಡೆದ ಅಧಿಕಾರಿಗಳ ಸಣ್ಣ ತಪ್ಪಿನಿಂದಾಗಿ ನಾವು ಜನಪ್ರತಿನಿಧಿಗಳು ಜನರ ಬಾಯಿಗೆ ಸಿಗುವಂತಾಗಿದೆ. ತಾಂತ್ರಿಕ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಜೊತೆಗೆ ಮಾತುಕತೆ ನಡೆಸಿದ್ದು 45 ದಿನದೊಳಗೆ ವರ್ಕ್ ಆರ್ಡರ್ ಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಸಭೆಗೆ ತಿಳಿಸಿದರು.

ಉಡುಪಿಯಲ್ಲಿ ಮೂರು ಜನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ಉಡುಪಿಗೆ ಹೆಮ್ಮೆ ತಂದಿದ್ದಾರೆ. ಮೇಸ್ತ್ರಿಯ ಮಗಳು ಗಾಯತ್ರಿ ಮತ್ತು ಮಲ್ಪೆಯ ಬಡತನದಲ್ಲಿ ಕಲಿತ ಪುನೀತ್ ನಾಯಕ್‌ಗೆ ನಮ್ಮ ಮನವಿಯ ಮೇರೆಗೆ ಕಾರ್ಕಳದ ಜ್ಞಾನ ಸುಧಾ ಕಾಲೇಜು ಮುಂದಿನ ಎರಡು ವರ್ಷ ಸಿಇಟಿ, ನೀಟ್ ಕೋಚಿಂಗ್ ಸಹಿತ ಉಚಿತ ಶಿಕ್ಷಣ ನೀಡಲು ಒಪ್ಪಿಕೊಂಡಿದೆ. ಈ ಬಾರಿ ಸರಕಾರಿ ಶಾಲೆಯಲ್ಲಿ ಉತ್ತಮ‌ ಫಲಿತಾಂಶ ಬಂದಿರುವುದರಿಂದ ಸರಕಾರಿ ಶಾಲೆಗೆ ಬೇಡಿಕೆ ಹೆಚ್ಚಾಗಿದೆ. ಎಲ್ಲ ಶಿಕ್ಷಕ- ಶಿಕ್ಷಕಿಯರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ಉಡುಪಿಯ ಸರಕಾರಿ ಬಾಲಕಿಯರ ಕಾಲೇಜು ಇಡೀ ದೇಶದಲ್ಲಿ ಕುಖ್ಯಾತಿಗೆ ಒಳಗಾಗಿತ್ತು. ಆದರೆ ಗಾಯತ್ರಿಯಿಂದಾಗಿ ಮತ್ತೆ ಖ್ಯಾತಿ ಪಡುವಂತಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

Edited By :
Kshetra Samachara

Kshetra Samachara

24/05/2022 08:18 pm

Cinque Terre

3.95 K

Cinque Terre

0

ಸಂಬಂಧಿತ ಸುದ್ದಿ