ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮೆಲ್ಕಾರ್ ಹೆದ್ದಾರಿ ತಾಸುಗಟ್ಟಲೆ ಟ್ರಾಫಿಕ್ ಜಾಮ್

ಬಂಟ್ವಾಳ: ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿರುವ ಹೊತ್ತಿನಲ್ಲೇ ಭಾನುವಾರ ಧಾರಾಕಾರ ಮಳೆಯೂ ಸುರಿದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಮೆಲ್ಕಾರ್ ಪೇಟೆಯುದ್ದಕ್ಕೂ ಟ್ರಾಫಿಕ್ ಜಾಮ್ ಕಂಡುಬಂತು.

ಅರ್ಧ ರಸ್ತೆಯಲ್ಲಿ ಹೈವೇ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ತೆರಳುವ ರಸ್ತೆಯ ಕಲ್ಲಡ್ಕ ಕಡೆಗೆ ಹೋಗುವ ಜಾಗ ಹಾಗೂ ಕಲ್ಲಡ್ಕದಿಂದ ಮೆಲ್ಕಾರ್‌ನಲ್ಲಿ ಮುಡಿಪು, ಸಜಿಪಕ್ಕೆ ತಿರುಗುವ ಜಾಗ ಹಾಗೂ ಬಿ.ಸಿ.ರೋಡ್ ಕಡೆಗೆ ತೆರಳುವ ಜಾಗದಲ್ಲೆಲ್ಲಾ ವಾಹನಗಳು ಅಸ್ತವ್ಯಸ್ತವಾಗಿ ಸಂಚರಿಸಿದವು. ಒಂದು ಹಂತದಲ್ಲಿ ವಾಹನಗಳು ಯಾವ ಕಡೆಗೆ ಸಂಚರಿಸುವುದು ಎಂಬ ಗೊಂದಲದಲ್ಲಿದ್ದರೆ, ಮತ್ತೊಂದೆಡೆ ರಾಂಗ್ ಸೈಡ್‌ನಲ್ಲಿ ವಾಹನಗಳು ಬಂದು ರಾಶಿಬಿದ್ದು, ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಸುರಿಯುವ ಮಳೆಯಲ್ಲಿ ಅಲ್ಲಿದ್ದ ಪೊಲೀಸರು, ಹೋಂ ಗಾರ್ಡ್‌ಗಳು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಈ ಮಧ್ಯೆ ಮಂಗಳೂರಿಗೆ ಸಾಗುವ ಆಂಬುಲೆನ್ಸ್ ಹಾಗೂ ಮಾರ್ಗ ದಾಟುವ ಜನರು ತೀವ್ರ ತೊಂದರೆ ಅನುಭವಿಸಬೇಕಾಯಿತು.

Edited By : Manjunath H D
Kshetra Samachara

Kshetra Samachara

22/05/2022 07:57 pm

Cinque Terre

6.5 K

Cinque Terre

0

ಸಂಬಂಧಿತ ಸುದ್ದಿ