ಬಜಪೆ: ಸೋಮವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಬಜಪೆಯ ಬಸ್ ನಿಲ್ದಾಣದ ಸಮೀಪದಿಂದ ಇಲ್ಲಿನ ಪೆಟ್ರೋಲ್ ಪಂಪ್‌ವರೆಗಿನ ಮುಖ್ಯ ರಸ್ತೆಯುದ್ದಕ್ಕೂ ಕಲ್ಲು ಮಣ್ಣುಗಳು ಸಂಗ್ರಹವಾಗಿದ್ದು, ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಬಜಪೆಯಿಂದ ಮಂಗಳೂರಿಗೆ ಸಾಗುವಂತಹ ರಸ್ತೆ ಇದಾಗಿದ್ದು, ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ರಸ್ತೆಯಂಚಿನಲ್ಲಿ ಅಸಮರ್ಪಕ ರೀತಿಯ ಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ರಸ್ತೆಯಂಚಿನಲ್ಲಿದ್ದ ಕಲ್ಲು ಮಣ್ಣುಗಳು ಮುಖ್ಯ ರಸ್ತೆಯಲ್ಲಿಯೇ ಸಂಗ್ರಹವಾಗುತ್ತಿದೆ. ಅಲ್ಲದೆ ಬಸ್ ನಿಲ್ದಾಣದಿಂದ ಇಲ್ಲಿನ ಪೆಟ್ರೋಲ್ ಪಂಪ್‌ನ ತನಕದ ರಸ್ತೆಯು ಹದಗೆಟ್ಟ ಸ್ಥಿತಿಯಲ್ಲಿದ್ದು, ಅಲ್ಲಲ್ಲಿ ಹೊಂಡಗಳು ಉಂಟಾಗಿವೆ. ಒಟ್ಟಾರೆಯಾಗಿ ನಿನ್ನೆ ಸುರಿದ ಮಳೆಗೆ ರಸ್ತೆಯುದ್ದಕ್ಕೂ ಕಲ್ಲು ಮಣ್ಣುಗಳು ಸಂಗ್ರಹವಾದ್ದರಿಂದ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರ ಪಾಡಂತು ಹೇಳತೀರದ್ದು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆ ರಸ್ತೆಯಂಚಿನಲ್ಲಿ ಸಮರ್ಪಕ ರೀತಿಯ ಚರಂಡಿ ವ್ಯವಸ್ಥೆ ಹಾಗೂ ಹದಗೆಟ್ಟ ರಸ್ತೆಯ ದುರಸ್ತಿ ಬಗ್ಗೆ ಸ್ಪಂದಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
17/05/2022 07:18 pm