ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ನಗರ ಪಂಚಾಯತ್ ಎದುರಿನ ಕಸ: ಚಲನಚಿತ್ರ ನಟ ಅನಿರುದ್ಧ್ ಆಕ್ರೋಶ

ಸುಳ್ಯ: ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ತುಂಬಿರುವ ಕಸದ ರಾಶಿಯ ಬಗ್ಗೆ ಕಿರುತೆರೆ-ಹಿರಿತೆರೆ ನಟ ಅನಿರುದ್ಧ್ ಹೇಳಿಕೆ ಭಾರಿ ವೈರಲ್ ಆಗಿದೆ. ಸುಳ್ಯದ ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕ ಹಾಗೂ ಬಿಜೆಪಿ ಮಂಡಲ ಸಾಮಾಜಿಕ ಜಾಲತಾಣ ವಿಭಾಗದ ಸಹ ಸಂಚಾಲಕ ಸುಪ್ರೀತ್ ಮೋಂಟಡ್ಕ ಅವರು ನಗರ ಪಂಚಾಯತ್ ಎದುರಿನ ಕಸದ ಚಿತ್ರಗಳನ್ನು ಅನಿರುದ್ಧ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿದ ಅನಿರುದ್ಧ್ ಅವರು ಹೇಳಿಕೆ ನಗರ ಪಂಚಾಯತಿ ಎದುರಿನ ಕಸ ನೀಡಿದ್ದು ನಗರ ಪಂಚಾಯತ್‌ನ ಕಸದ ರಾಶಿ ಬೆಟ್ಟದ ಹಾಗೆ ಇದೆ. ಹಲವು ವರ್ಷಗಳಿಂದ ಅದಕ್ಕೆ ಪರಿಹಾರ ಕಂಡುಕೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಇದನ್ನು ತೆರವು ಮಾಡಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀವವೈರಲ್ ಆಗುತಿದೆ.

ಸುಪ್ರೀತ್ ಮೋಂಟಡ್ಕ

ಬಿಜೆಪಿ ಮಾಧ್ಯಮ ಗ್ರೂಪ್‌ನಿಂದ ಸುಪ್ರೀತ್ ಔಟ್:

ಅನಿರುದ್ಧ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ವೀಡಿಯೋವನ್ನು ಬಿಜೆಪಿ ಸಾಮಾಜಿಕ ಮಾಧ್ಯಮದ ವಾಟ್ಸಾಪ್ ಗ್ರೂಪ್‌ನಲ್ಲಿ ಸುಪ್ರೀತ್ ಹಂಚಿಕೊಂಡರು. ಕೂಡಲೇ ಬಿಜೆಪಿ ಮಂಡಲ ಪ್ರಧಾನ ಸುಬೋದ್ ಶೆಟ್ಟಿ ಮೇನಾಲ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿ ಮಾಧ್ಯಮ ಗ್ರೂಪ್‌ನಿಂದ ರಿಮೂವ್ ಮಾಡಲಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕನೇ ಮಾಧ್ಯಮ ಗ್ರೂಪ್‌ನಿಂದ ಔಟ್ ಆಗಿರುವುದು ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ.

Edited By : Manjunath H D
Kshetra Samachara

Kshetra Samachara

10/05/2022 08:08 pm

Cinque Terre

23.3 K

Cinque Terre

1

ಸಂಬಂಧಿತ ಸುದ್ದಿ