ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶೂನ್ಯ ನೆರಳಿನ ದಿನ- ನಿಮ್ಮೂರಲ್ಲೂ ನೋಡಿ !

ಉಡುಪಿ: ಉಡುಪಿಯಲ್ಲಿ ಸೋಮವಾರ ಶೂನ್ಯ ನೆರಳಿನ ದಿನ ಅನುಭವಕ್ಕೆ ಬಂದೆದೆ. ವರ್ಷದಲ್ಲಿ ಎರಡು ದಿನ ಮಧ್ಯಾಹ್ನ ಸೂರ್ಯ ನೇರ ನೆತ್ತಿಯ ಮೇಲೆ ಬಂದು ಕೆಲ ಕ್ಷಣ ನೆರಳು ಕಾಣುವುದಿಲ್ಲ. ಇದನ್ನು 'ಝೀರೋ ಶಾಡೋ ಡೇ' ಎನ್ನುತ್ತಾರೆ.

ಸೂರ್ಯ ನ ಸುತ್ತ ತಿರುಗುವ ಭೂಮಿ ತನ್ನ ಅಕ್ಷಕ್ಕೆ 23.5 ಡಿಗ್ರಿ ವಾಲಿಕೊಂಡಿರುವುದೇ ಇದಕ್ಕೆ ಕಾರಣ. ಇದನ್ನು ಯಾವುದೇ ಮರ, ಕಟ್ಟಡಗಳ ನೆರಳಿನಿಂದ ಈ ದಿನ ಮಧ್ಯಾಹ್ನ ಗಮನಿಸಬಹುದು.

ಈ ರೀತಿಯ ಶೂನ್ಯ ನೆರಳಿನ ದಿನ, ಭೂಮಿಯ ಎಲ್ಲಾ ಪ್ರದೇಶದಲ್ಲಿ ಸಂಭವಿಸುವುದಿಲ್ಲ. ಮಕರ ಸಂಕ್ರಾಂತಿ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದವರೆಗಿನ ಭೂ ಭಾಗದಲ್ಲಿ ಮಾತ್ರ ವರ್ಷ ಕ್ಕೆ ಎರಡು ದಿನ ಶೂನ್ಯ ನೆರಳಿನ ದಿನವಾಗಿರುತ್ತೆ. ಈ ಎರಡು ವೃತ್ತಗಳ ಹೊರಗಿರುವ ಭೂ ಭಾಗದಲ್ಲಿ ಸೂರ್ಯ ಎಂದೂ ನೇರ ಬರುವುದೇ ಇಲ್ಲ.

ಮಂಗಳೂರಿನ ಜನರು ಏಪ್ರಿಲ್ 24 ರಂದು ಮಧ್ಯಾಹ್ನ 12: 28 ಕ್ಕೆ ಮತ್ತು ಏಪ್ರಿಲ್ 25 ರಂದು ಉಡುಪಿಯಲ್ಲಿ ಮಧ್ಯಾಹ್ನ 12: 29 ಕ್ಕೆ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ ಈ ವಿದ್ಯಮಾನ ಏಪ್ರಿಲ್ 24 ರಂದು ಮಧ್ಯಾಹ್ನ 12: 18 ಕ್ಕೆ ಗಮನಿಸಲಾಗಿದೆ.

ಉಳಿದಂತೆ ಕರ್ನಾಟಕದಲ್ಲಿ ಶೂನ್ಯ ನೆರಳಿನ ದಿನದ ದಿನಾಂಕಗಳು ಹೀಗಿವೆ:

26 ಏಪ್ರಿಲ್: ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರ್

27 ಏಪ್ರಿಲ್: ಭಟ್ಕಳ , ಶಿವಮೊಗ್ಗ, ಚನ್ನಗಿರಿ

28 ಏಪ್ರಿಲ್: ಹೊನ್ನವರ, ಕುಮ್ಟ , ಶಿಕಾರಿಪುರ, ಚಿತ್ರದುರ್ಗ

29 ಏಪ್ರಿಲ್: ಗೋಕರ್ಣ, ಶಿರಸಿ , ರಾಣೆಬೆನ್ನೂರು , ದಾವಣಗೆರೆ

30 ಏಪ್ರಿಲ್: ಕಾರವಾರ , ಹಾವೇರಿ

01 ಮೇ: ಹುಬ್ಬಳ್ಳಿ , ಹೊಸಪೇಟೆ , ಬಳ್ಳಾರಿ

02 ಮೇ: ಧಾರವಾಡ, ಗದಗ

03 ಮೇ: ಬೆಳಗಾವಿ, ಸಿಂಧನೂರ್

04 ಮೇ: ಗೋಕಾಕ್, ಬಾಗಲಕೋಟೆ , ರಾಯಚೂರು

06 ಮೇ: ಯಾದಗಿರಿ

07 ಮೇ: ವಿಜಯಪುರ

09 ಮೇ: ಕಲ್ಬುರ್ಗಿ

10 ಮೇ: ಹುಮ್ನಾಬಾದ್

11 ಮೇ: ಬೀದರ್

Edited By :
PublicNext

PublicNext

27/04/2022 11:28 am

Cinque Terre

35.08 K

Cinque Terre

0

ಸಂಬಂಧಿತ ಸುದ್ದಿ