ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಲ್ಸಂಕ ಜಂಕ್ಷನ್ ವಾಹನ ದಟ್ಟಣೆ ತಪ್ಪಿಸಲು ಸರ್ಕಲ್ ನಿರ್ಮಾಣ -ರಘುಪತಿ ಭಟ್

ಉಡುಪಿ: ತೀರ್ಥಹಳ್ಳಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ - 169A ಹಾದುಹೋಗುವ ಕಲ್ಸಂಕ ಜಂಕ್ಷನ್ ಅತಿಯಾದ ವಾಹನ ದಟ್ಟಣೆಯಿಂದ ಕೂಡಿದೆ. ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಸರ್ಕಲ್ ರಚಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಜೊತೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು.

ಈ ತೀರ್ಥಹಳ್ಳಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ - 169A ಹಾದು ಹೋಗುವ ಪರ್ಕಳ ಪೇಟೆಯಿಂದ ಮಣಿಪಾಲ, ಉಡುಪಿ ನಗರದವರೆಗೆ ನಗರ ಪ್ರದೇಶವಾಗಿದ್ದು, ಉಡುಪಿ ಕೃಷ್ಣಮಠವನ್ನು, ಮಲ್ಪೆಯನ್ನು ಹಾಗೂ ಬೆಂಗಳೂರು - ಮಂಗಳೂರು - ಮುಂಬಾಯಿ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುತ್ತಿರುತ್ತದೆ. ವಿಶ್ವವಿಖ್ಯಾತ ಶ್ರೀಕೃಷ್ಣಮಠಕ್ಕೆ ಬರುವ ಯಾತ್ರಿಕರ ವಾಹನಗಳು ಈ ಕಲ್ಸಂಕ ಜಂಕ್ಷನ್ ನಲ್ಲಿ ತಿರುವನ್ನು ಪಡೆಯುತ್ತಿದೆ.

ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳು ತಡೆಯಿಲ್ಲದೆ ಸಂಚರಿಸುವಂತಾಗಲು ಶಾಸಕ ರಘುಪತಿ ಭಟ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸರ್ಕಲ್ ರಚಿಸುವ ಬಗ್ಗೆ ತಿಳಿಸಿರುವಂತೆ ಈ ಯೋಜನೆಯ ಅಂದಾಜು ವೆಚ್ಚಗಳ ಸಹಿತ ಪ್ರಾಯೋಗಿಕ ನೀಲನಕ್ಷೆಯನ್ನು ತಯಾರಿಸಿ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ನಾಯ್ಕ್ ಹಾಗೂ ಸಹಾಯಕ ಅಭಿಯಂತರರಾದ ಮಂಜುನಾಥ್ ನಾಯಕ್ ಅವರು ವಿವರಗಳನ್ನು ನೀಡಿ ಚರ್ಚಿಸಿದರು.

Edited By : PublicNext Desk
Kshetra Samachara

Kshetra Samachara

25/04/2022 11:44 am

Cinque Terre

1.49 K

Cinque Terre

0