ಮಂಗಳೂರು: ನಗರದ ಅತೀ ದೊಡ್ಡ 'ಕೋ-ಅಪರೇಟಿವ್ ಸೂಪರ್ ಮಾರ್ಕೆಟ್' ಜನತಾ ಬಜಾರ್ ನಲ್ಲಿ ಗ್ರಾಹಕರ ಸೇವೆಗಾಗಿ ಬ್ಯಾಂಕಿಂಗ್ ಹಾಗೂ ಇ-ಸ್ಟ್ಯಾಂಪಿಂಗ್ ಎಂಬ ನೂತನ ವಿಭಾಗ ಸೇರ್ಪಡೆಯಾಗಲಿದೆ ಎಂದು ಜನತಾ ಬಜಾರ್ ನ ಅಧ್ಯಕ್ಷ ಎಂ.ಪುರುಷೋತ್ತಮ ಭಟ್ ಹೇಳಿದರು.
ಜನತಾ ಬಜಾರ್‌ನಲ್ಲಿ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ಸಾಮಾಗ್ರಿಗಳು ಹಾಗೂ ವ್ಯವಸ್ಥೆಗಳು ಉಪಲಬ್ಧವಿರಬೇಕೆಂದು ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಇ-ಸ್ಟ್ಯಾಂಪಿಂಗ್ ಸೇವೆಯನ್ನು ಏ.23 ರಂದು ಆರಂಭಿಸಲಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಭಾಗಗಳ ಉದ್ಘಾಟನೆ ಮಾಡಲಿದ್ದಾರೆ.
ಅಲ್ಲದೆ ಗ್ರಾಹಕರ ಉಳಿತಾಯ ಮನೋಭಾವನೆ ಹೆಚ್ಚಿಸುವ ಸಲುವಾಗಿ ಉಳಿತಾಯ ಖಾತೆಗಳನ್ನು ತೆರೆಯಲಾಗುತ್ತದೆ. ಅತ್ಯಾಕರ್ಷಕ ಬಡ್ಡಿದರದಲ್ಲಿ ನಿರಖು ಠೇವಣಾತಿ ಸ್ವೀಕರಿಸಲಾಗುತ್ತದೆ. ಅಲ್ಲದೆ ಗ್ರಾಹಕರಿಗೆ ಕನಿಷ್ಠ ಬಡ್ಡಿ ದರದಲ್ಲಿ ಚಿನ್ನಾಭರಣಗಳ ಸಾಲ ನೀಡಲಾಗುತ್ತದೆ ಎಂದು ಎಂ.ಪುರುಷೋತ್ತಮ ಭಟ್ ಹೇಳಿದರು.
Kshetra Samachara
20/04/2022 03:08 pm