ಉಡುಪಿ: ನಮಗೆ ನಗರದಲ್ಲಿ ದುಡಿಯಲು ಪರ್ಮಿಟ್ ಇದ್ದರೂ ಕೂಡ ನಗರವ್ಯಾಪ್ತಿಯ ರಿಕ್ಷಾ ನಿಲ್ದಾಣಗಳಲ್ಲಿ ದುಡಿಯಲು ನಮ್ಮನ್ನು ಬಿಡುತ್ತಿಲ್ಲ ಎಂದು ಆಟೋಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಆಟೋ ಚಾಲಕರು, ನಿಯಮ ಪ್ರಕಾರ ನಗರದ ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಮಗೆ ದುಡಿಯಲು ಅವಕಾಶವಿದೆ.
ಈ ಸಂಬಂಧ ಕೋರ್ಟ್ ಕೂಡ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ನಗರದ ಆಟೋ ಸ್ಟ್ಯಾಂಡ್ ಗಳಲ್ಲಿ ಆಟೋ ನಿಲ್ಲಿಸಲು ಹೋದರೆ ನಮಗೆ ಅಲ್ಲಿ ನಿಲ್ಲಲು ಅವಕಾಶ ಕೊಡುತ್ತಿಲ್ಲ. ಈ ಬಗ್ಗೆ ನಾವು ಆರ್ ಟಿಓ ಮತ್ತು ನಗರಸಭೆ ಅವರ ಗಮನಕ್ಕೆ ತಂದಿದ್ದೇವೆ. ಆದರೂ ನಮ್ಮನ್ನು ದುಡಿಯಲು ಬಿಡುತ್ತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಎಲ್ಲರಿಗೂ ಕೂಡ ಸ್ಟ್ಯಾಂಡ್ ಗಳಲ್ಲಿ ರಿಕ್ಷಾ ನಿಲ್ಲಿಸಲು ಅವಕಾಶವಿದೆ. ಆದರೆ ಉಳಿದ ಆಟೋ ಚಾಲಕರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಟೋ ಚಾಲಕರು ಪಬ್ಲಿಕ್ ನೆಕ್ಸ್ಟ್ ಜೊತೆ ಅಳಲು ತೋಡಿಕೊಂಡಿದ್ದಾರೆ.
Kshetra Samachara
14/04/2022 01:22 pm