ಹಳೆಯಂಗಡಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ ಸೇತುವೆ ಬಳಿ ತಾತ್ಕಾಲಿಕ ತ್ಯಾಜ್ಯ ಶೇಖರಣಾ ಘಟಕ ಆರಂಭವಾಗಿದ್ದು, ಪಂಚಾಯತ್ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಸೇತುವೆ ಬಳಿ ಅನೇಕ ದಿನಗಳಿಂದ ಕಸದ ರಾಶಿ ಬಿದ್ದಿದ್ದು, ಸದ್ಯ ತಾತ್ಕಾಲಿಕ ತ್ಯಾಜ್ಯ ವಿಲೇವಾರಿ ಘಟಕದಂತಾಗಿದೆ.
ಕಸದ ರಾಶಿ ಇರುವ ಪ್ರದೇಶ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ತಾಗಿಕೊಂಡಿದೆ. ಹಾಗಾಗಿ ವಾಹನಗಳ ಗಾಳಿಗೆ ಅಲ್ಲಿರುವ ಪ್ಲಾಸ್ಟಿಕ್ ಕೈಚೀಲಗಳು ಗಾಳಿಗೆ ರಸ್ತೆಯಲ್ಲಿ ಓಡಾಡುವವರ ವಾಹನ ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆರಗುತ್ತಿರುವುದರಿಂದ ಸವಾರರು ಪರದಾಡುವಂತಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಶೀಘ್ರ ಎಚ್ಚೆತ್ತುಕೊಂಡು ಕಸ ವಿಲೇವಾರಿ ಘಟಕದಂತಿರುವ ಪಾವಂಜೆ ಸೇತುವೆ ಸಮೀಪದ ಕಸದರಾಶಿಯನ್ನು ತೆರವು ಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
10/04/2022 12:37 pm