ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ ದಂಗೆ ದೇಶದ ಇತಿಹಾಸದಲ್ಲಿ ದಾಖಲಾಗದಿರುವುದು ದುರದೃಷ್ಟಕರ

ಮಂಗಳೂರು: ಚರಿತ್ರೆಯಲ್ಲಿ ಕೆಲವೊಂದು ವಿಚಾರಗಳು ದಾಖಲಾಗಿರೋದಿಲ್ಲ. ಇಂತಹ ವಿಚಾರಗಳನ್ನು ಇತಿಹಾಸದಲ್ಲಿ ಜೋಡಣೆ ಮಾಡಬೇಕಾದ ಅನಿವಾರ್ಯತೆಯಿದೆ. ಬ್ರಿಟಿಷ್ ದಾಸ್ಯದಿಂದ ಜನರನ್ನು ಮುಕ್ತರನ್ನಾಗಿಸಬೇಕೆಂದು ಕೆದಂಬಾಡಿ ರಾಮಯ್ಯ ಗೌಡರು ಮಾಡಿರುವ ಹೋರಾಟ ದೇಶದ ಇತಿಹಾಸದಲ್ಲಿ ಇಲ್ಲದಿರುವುದು ಬಹಳ ದುರದೃಷ್ಟಕರ ಎಂದು ಮಾಜಿ ಸಿಎಂ ಸದಾನಂದ ಗೌಡ ಅವರು ಹೇಳಿದರು.

ನಗರದ ಬಾವುಟಗುಡ್ಡೆ ಠಾಗೋರ್ ಪಾರ್ಕ್ ನಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಅನಾವರಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿ, ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಆರಂಭವಾಗಿದ್ದು, 1857ರ ಸಿಪಾಯಿ ದಂಗೆಯ ಮೂಲಕ ಎಂಬುದು ದೇಶದ ಚರಿತ್ರೆಯಲ್ಲಿ ದಾಖಲಾಗಿದೆ. ಆದರೆ ಅದಕ್ಕಿಂತ 20 ವರ್ಷಗಳ ಮೊದಲೇ ನಡೆದಿರುವ ಮಂಗಳೂರಿನ ಕ್ರಾಂತಿ ಎಂಬ ವಿಚಾರವನ್ನು ಇಡೀ ದೇಶದ ಸ್ವಾತಂತ್ರ್ಯ ಹೋರಾಟ ಇತಿಹಾಸದಲ್ಲಿ ದಾಖಲಿಸಬೇಕಾದ ತುರ್ತು ಅಗತ್ಯವಿದೆ ಎಂದರು.

1837ರಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ದ.ಕ. ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ ಮತ್ತು ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದು ಈ ಪ್ರದೇಶಕ್ಕೆ 13 ದಿನಗಳ ಕಾಲ ಸ್ವಾತಂತ್ರ್ಯ ಗಳಿಸಿ ಕೊಟ್ಟು ಹುತಾತ್ಮರಾದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಅನಾವರಣಕ್ಕೆ ಇಂದು ಗುದ್ದಲಿ ಪೂಜೆ ನಡೆದಿರುದು ನಿಜಕ್ಕೂ ಸಂತಸದ ವಿಚಾರ. ಈ ಕಂಚಿನ ಪ್ರತಿಮೆ ಎಲ್ಲರಿಗೂ ಕಾಣುವಂತೆ ಅತಿ ಬೃಹತ್ ಹಾಗೂ ಎತ್ತರದಲ್ಲಿ ಸ್ಥಾಪನೆ ಮಾಡಬೇಕು. ಅಲ್ಲದೆ ಕೆದಂಬಾಡಿ ರಾಮಯ್ಯ ಗೌಡರಂತಹ ಹಿಂದಿನ ಸ್ವಾತಂತ್ರ್ಯದ ಹೋರಾಟದ ವಿಚಾರದ ಅಧ್ಯಯನದ ಬಗ್ಗೆ ಮಂಗಳೂರು ವಿವಿಯಲ್ಲಿ ಅಧ್ಯಯನ ಮಾಡಲು ಪೀಠ ಸ್ಥಾಪನೆ ಆಗಬೇಕು ಎಂದು ಸದಾನಂದ ಗೌಡ ಒತ್ತಾಯಿಸಿದರು.

Edited By :
Kshetra Samachara

Kshetra Samachara

05/04/2022 03:38 pm

Cinque Terre

15.71 K

Cinque Terre

0

ಸಂಬಂಧಿತ ಸುದ್ದಿ