ಮುಲ್ಕಿ: ಕಳೆದ ಕೆಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಸರ್ವಿಸ್ ರಸ್ತೆ ಕಾಮಗಾರಿ ಕಳೆದ ಒಂದು ವಾರದಿಂದ ಆರಂಭವಾಗಿದ್ದು ಬಿರುಸಿನಿಂದ ನಡೆಯುತ್ತಿದೆ. ಮುಲ್ಕಿ ಬಸ್ ನಿಲ್ದಾಣದ ಕೆಳ ಬದಿಯ ಲಯನ್ಸ್ ಕಟ್ಟಡದ ಬಳಿಯಿಂದ ಸರ್ವಿಸ್ ರಸ್ತೆ ಕಾಮಗಾರಿ ಆರಂಭವಾಗಿದೆ.
ಸರ್ವಿಸ್ ರಸ್ತೆ ಕಾಮಗಾರಿ ನಡೆಸುತ್ತಿರುವಾಗ ಗುತ್ತಿಗೆದಾರರು ರಸ್ತೆಗೆ ನೀರು ಹಾಕದೆ ಪರಿಸರ ಧೂಳುಮಯವಾಗಿದೆ ಎಂದು ಸ್ಥಳೀಯ ಅಂಗಡಿ ಮಾಲೀಕರು ಆರೋಪಿಸಿ ಮುಲ್ಕಿ ನಗರ ಪಂಚಾಯತಿಗೆ ದೂರು ನೀಡಿದ್ರು.. ದೂರಿನ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ರಸ್ತೆ ಅಗೆಯುವಾಗ ಧೂಳುಮಯವಾಗದಂತೆ ನೀರು ಹಾಕಬೇಕು ಎಂದು ತಾಕೀತು ಮಾಡಿದ್ದಾರೆ. ಅದರಂತೆ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿರುವಾಗ ನೀರು ಹಾಕಿದ್ದು ಧೂಳಿನಿಂದ ಕಂಗೆಟ್ಟಿದ್ದ ಅಂಗಡಿ ಮಾಲೀಕರು ಇದೀಗ ನಿಟ್ಟುಸಿರುಬಿಡುವಂತಾಗಿದೆ.
ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ಮುಂದಿನ ಕೆಲವು ದಿನಗಳಲ್ಲಿ ಮುಲ್ಕಿ ಬಸ್ ನಿಲ್ದಾಣ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಳೆದ ಕೆಲ ವರ್ಷಗಳಿಂದ ಮುಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆದ ಬಳಿಕ ಸರ್ವಿಸ್ ರಸ್ತೆ ಕಾಮಗಾರಿ ಅರ್ಧಂಬರ್ಧ ಆಗಿತ್ತು. ಇದ್ರಿಂದ ಅನೇಕ ಅಪಘಾತಗಳು ಸಂಭವಿಸಿ ಪ್ರಾಣ ಹಾನಿ ಕೂಡಾ ಆಗಿತ್ತು.
Kshetra Samachara
05/04/2022 02:59 pm