ಕುಂದಾಪುರ :ಕೋಟೇಶ್ವರ ಸಹನಾ ಕನ್ವೇನ್ ಷನ್ ಸೆಂಟರ್ ಮತ್ತು ಯುವ ಗಾರ್ಡಿಯನ್ನೀಯಾ ಹತ್ತಿರ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ದುರ್ವಾಸನೆ ಬೀರುತ್ತಿದೆ. ಇಲ್ಲಿ ವಾಸಿಸುವ ಜನರು ದಿನನಿತ್ಯ ಮೂಗು ಮುಚ್ಚಿ ಓಡಾಡುವ ಸ್ಥಿತಿ ಉಂಟಾಗಿದೆ.
ವಾರ್ಡಿನ ಜನರು ಬಹಳಷ್ಟು ಸಲ ಕೋಟೇಶ್ವರ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಅಧಿಕಾರಿಗಳ ಬಳಿ ಕೇಳಿದರೆ ನಮ್ಮ ಮೇಲೆ ರಾಜಕೀಯ ಒತ್ತಡ ಇದೆ ಆದಷ್ಟು ಬೇಗ ಪರಿಹಾರ ನೀಡುತ್ತೇವೆ ಎಂದು ಸಬೂಬು ಹೇಳುತ್ತಾರಂತೆ.ಈಗಾಗಲೇ ಸುತ್ತಮುತ್ತಲಿನ ಮನೆಯ ಕುಡಿಯುವ ನೀರಿನ ಬಾವಿ ಕಲುಷಿತಗೊಂಡಿದೆ. ನೀರನ್ನು ಕುಡಿಯುವುದು ಬಿಡಿ, ಕೈ ತೊಳೆದುಕೊಂಡು ಸ್ನಾನ ಮಾಡಿದರೆ ಚರ್ಮರೋಗ ಖಚಿತ ಅನ್ನುವಂತಿದೆ ಇಲ್ಲಿನ ಪರಿಸ್ಥಿತಿ.
ಅಧಿಕಾರಿಗಳೇ ನೀವೇ ಈ ಕಾಲೋನಿಗೆ ಭೇಟಿ ನೀಡಿ ಈ ಕಲುಷಿತ ನೀರನ್ನು ಒಂದು ಲೋಟ ಕುಡಿದು ನೋಡಿ, ಆಗ ಸಾರ್ವಜನಿಕರ ಗೋಳು ನಿಮಗೆ ಅರ್ಥವಾಗಬಹುದು ಎಂದು ಜನರು ಆಗ್ರಹಿಸಿದ್ದಾರೆ.
ತಕ್ಷಣ ಕೋಟೇಶ್ವರ ಗ್ರಾಮಪಂಚಾಯತ್ ನ ಪಿಡಿಓ ಗ್ರಾಮ ಲೆಕ್ಕಿಗರು, ತಹಶೀಲ್ದಾರರು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Kshetra Samachara
04/04/2022 11:41 am