ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಮುಖ್ಯರಸ್ತೆಯಲ್ಲಿಯೇ ಕಲ್ಲು,ಮಣ್ಣು ರಾಶಿ,‌ಸಂಚಾರ ದುಸ್ತರ

ಬಜಪೆ: ಪಟ್ಟಣದ ಪಂಚಾಯತ್ ವ್ಯಾಪ್ತಿಯ ಮಾರುಕಟ್ಟೆ ಸಮೀಪದ ಪೆಟ್ರೋಲ್ ಬಂಕ್ ನ ಬಳಿ ಹಾಗೂ ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ಜಂಕ್ಷನ್ ನ ಪಕ್ಕದ ಮುಖ್ಯ ರಸ್ತೆಯಲ್ಲಿಯೇ ಕಲ್ಲು ಹಾಗೂ ಮಣ್ಣು ಶೇಖರಣೆ ಆದ ಪರಿಣಾಮ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಬಜಪೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನಿನ್ನೆ ರಾತ್ರಿಯಿಂದ ಸಾಧರಣ ಮಳೆಯಾಗಿದ್ದು,ರಸ್ತೆಯ ಅಂಚಿನಲ್ಲಿದ್ದ ಮಣ್ಣು ಸಹಿತ ಸಣ್ಣ ಗಾತ್ರದ ಕಲ್ಲುಗಳು ಮಳೆಯ ನೀರಿಗೆ ಕೊಚ್ಚಿ ಕೊಂಡು ಮುಖ್ಯ ರಸ್ತೆಯ ಉದ್ದಕ್ಕೂ ಶೇಖರಣೆಯಾಗಿದೆ.ರಸ್ತೆಯ ಅಂಚಿನಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ಮುಖ್ಯ ರಸ್ತೆಯಲ್ಲಿಯೇ ಹರಿದು ಹೋಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ .

ಅಲ್ಲದೆ ರಸ್ತೆಯ ಅಲ್ಲಲ್ಲಿ ಡಾಂಬರು ಕೂಡ ಎದ್ದು ಹೋಗಿ ಸಣ್ಣ ಸಣ್ಣ ಹೊಂಡಗಳು ಉಂಟಾಗಿದೆ.ಈ ಬಗ್ಗೆ ಸಂಬಂಧಪಟ್ಟವರು ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ಅಲ್ಲಲ್ಲಿ ಕಿತ್ತುಹೋದ ರಸ್ತೆಯ ದುರಸ್ತಿ ಕಾರ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

23/03/2022 08:41 am

Cinque Terre

9.09 K

Cinque Terre

2