ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ರಸ್ತೆ ಕಾಮಗಾರಿಗೆ ಅಡ್ಡಿ-ಕಾವಳಪಡೂರು ಗ್ರಾಪಂ ಮುಂದೆ ಪ್ರತಿಭಟನೆಗೆ ನಿರ್ಧಾರ

ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ದರ್ಖಾಸು ಎಂಬಲ್ಲಿ ರಸ್ತೆ ಸಂಪರ್ಕ ಕಾಮಗಾರಿಗೆ ಅಡ್ಡಿ ಪಡಿಸಿರುವುದನ್ನು ವಿರೋಧಿಸಿ ಮಾ.22 ರಂದು ಕಾವಳಪಡೂರು ಗ್ರಾ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22 ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ ರಸ್ತೆ ಸಂಪರ್ಕ ಕಾಮಗಾರಿಗೆ 67 ಸಾ.ರೂ. ಅನುದಾನವನ್ನು ಮಂಜೂರು ಮಾಡಿದೆ. ಪ.ಜಾತಿಗೊಳಪಟ್ಟ 8 ಮನೆಗಳಿದ್ದು,ಇಲ್ಲಿರುವ ಸಂಪರ್ಕ ರಸ್ತೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಲು ಗುತ್ತಿಗೆದಾರ ಸಾಮಾಗ್ರಿಗಳನ್ನು ತಂದಿದ್ದು, ಇದೀಗ ಈ ಕಾಮಗಾರಿಗೆ ಕೆಲವರು ಅಡ್ಡಿ ಪಡಿಸುವ ಮೂಲಕ ಪ.ಜಾತಿ-ಪಂಗಡದ ಅನುದಾನದ ಬಳಕೆಗೆ ತಡೆ ಒಡ್ಡಿದ್ದಾರೆ ಎಂದು ಅವರು ಅಪಾದಿಸಿದ್ದಾರೆ.

ಇದನ್ನು ವಿರೋಧಿಸಿ ಗ್ರಾ.ಪಂ.ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಶೇಖರ ಯು.,ಶೇಖರನಾಯ್ಕ್ ನಗ್ರಿ,ವಾಸು ಮಧ್ವ ರವರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

17/03/2022 04:05 pm

Cinque Terre

2.49 K

Cinque Terre

0

ಸಂಬಂಧಿತ ಸುದ್ದಿ