ಕಾಪು:ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ ನಾರಾಯಣ ಗುರು ಸಭಾ ಭವನದ ಬಳಿಯ ಸರ್ವಿಸ್ ರಸ್ತೆ ಬದಿಯಲ್ಲಿ ಮಳೆ ನೀರು ಹರಿಯುವ ತೋಡು ಮುಚ್ಚಿ, ನವಯುಗ ಕಂಪೆನಿ ನಡೆಸುತ್ತಿದ್ದ ಮಾರ್ಗ ಕಾಮಗಾರಿಗೆ ಈಗ ಗ್ರಾಮ ಪಂಚಾಯತ್ ನಿಂದ ತಡೆ ಒಡ್ಡಲಾಗಿದೆ.
ತೋಡು ಮುಚ್ಚಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ನೇತೃತ್ವದಲ್ಲಿ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯರು ಸ್ಥಳಕ್ಕೆ ತೆರಳಿ ಕಾಮಗಾರಿಗೆ ತಡೆಯೊಡ್ಡಲಾಗಿದೆ.
ಬಳಿಕ ನವಯುಗ ಕಂಪೆನಿ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪಂಚಾಯಿತಿ ಮನವಿಯಂತೆ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಯಿತು.
Kshetra Samachara
10/03/2022 01:43 pm