ಉಡುಪಿ: ಸ್ವಚ್ಛತೆ ,ತ್ಯಾಜ್ಯ ವೀಲೇವಾರಿ ಹೀಗೆ ಉಡುಪಿ ನಗರಸಭೆ ಅನೇಕ ಹೆಗ್ಗಳಿಕೆ ಹೊಂದಿದೆ. ಆದರೆ ನಗರಸಭೆ ಕಛೇರಿ ಬಳಿಯ ಅಲಂಕಾರ್ ಚಿತ್ರಮಂದಿರದ ಮುಂಭಾಗ ಕುಡಿಯುವ ನೀರಿನ ಕೊಳವೆ ಒಡೆದು ಹಲವು ದಿನಗಳಿಂದ ನೀರು ಪೋಲಾಗುತ್ತಿದೆ.
ಇಷ್ಟಾದರೂ ನಗರಸಭೆ ಅಧಿಕಾರಿಗಳು ಈ ಕಡೆ ಗಮನ ಹರಿಸಿಲ್ಲ. ತಕ್ಷಣ ನಗರಸಭೆ ಅಧಿಕಾರಿಗಳು ಕೊಳವೆ ದುರಸ್ತಿ ಪಡಿಸುವಂತೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
Kshetra Samachara
09/03/2022 08:33 am