ಸಂತೆಕಟ್ಟೆ: ಇದು ಸಂತೆಕಟ್ಟೆ ಜಂಕ್ಷನ್ ನಿಂದ ಕಲ್ಯಾಣಪುರಕ್ಕೆ ಹೋಗುವ ತಿರುವಿನ ಜಾಗದ ದೃಶ್ಯ.ಕೆನರಾ ಯೂನಿಯನ್ ಬ್ಯಾಂಕ್ ಎದುರಿನ ಈ ಜಾಗದಿಂದ ಕಲ್ಯಾಣಪುರಕ್ಕೆ ಹೋಗುವ ರಸ್ತೆ ಡಾಮರೀಕರಣ ಆಗಿದೆ. ಇಲ್ಲಿಂದ ನೇಜಾರು ರಸ್ತೆಗೂ ಡಾಮರೀಕರಣ ಆಗಿದೆ.ಆದರೆ ಕೇವಲ ಹತ್ತು ಅಡಿ ಒಂದು ಚರಂಡಿ ಕಾಮಗಾರಿಗೋಸ್ಕರ ಈ ರಸ್ತೆಗೆ ಡಾಮರೀಕರಣ ಆಗಿಲ್ಲ.
ಈ ಜಂಕ್ಷನ್ ನಲ್ಲಿ ಚರಂಡಿ ಕಾಮಗಾರಿ ಆಗಿ ಒಂದೂವರೆ ವರ್ಷವೇ ಕಳೆದಿದೆ. ಆದರೆ ಹತ್ತು ಅಡಿ ಜಾಗ ಹಾಗೇ ಉಳಿದುಕೊಂಡಿದೆ.ನಿತ್ಯ ನೂರಾರು ಶಾಲೆ, ಕಾಲೇಜು ವಿದ್ಯಾರ್ಥಿಗಳು ಹೋಗುವ ರಸ್ತೆ ಇದು. ಪಂಚಾಯತ್ ಸದಸ್ಯರು ,ಸಾವಿರಾರು ಜನಸಾಮಾನ್ಯರು ನಿತ್ಯ ಓಡಾಡುವ ರಸ್ತೆ. ಮೇಲಾಗಿ ಪ್ರತಿ ಭಾನುವಾರ ವಾರದ ಸಂತೆ ಇದೇ ರಸ್ತೆಯಲ್ಲಿ ನಡೆಯುತ್ತದೆ. ಚರಂಡಿಯ ಉಬ್ಬು ತಗ್ಗಿನಿಂದಾಗಿ ದಿನನಿತ್ಯ ಇಲ್ಲಿ ಅಫಘಾತಗಳು ಸ್ಕಿಡ್ ಗಳು ಸರ್ವೇ ಸಾಮಾನ್ಯ. ಪಕ್ಕದಲ್ಲೇ ರಿಕ್ಷಾ, ಟೆಂಪೋ ಚಾಲಕ ಮಾಲಕರ ತಂಗುದಾಣವಿದೆ. ಆದರೂ ಯಾರಿಗೂ ಈ ರಸ್ತೆಯ ಸಮಸ್ಯೆ ಅರ್ಥವಾಗಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಇಲ್ಲಿನ ಸಮಸ್ಯೆ ಬಗೆಹರಿಸಿದರೆ ಸ್ಥಳೀಯ ಜನರಿಗಾಗುವ ತೊಂದರೆ ತಪ್ಪಿದಂತಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
04/03/2022 08:05 pm