ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರದಲ್ಲೇ 'ಕೊಳಚೆ ಕೊಳ' ನಿರ್ಮಾಣ!; ನಗರಸಭೆ ಜಾಣ ಕುರುಡು ಪ್ರದರ್ಶನ

ವರದಿ: ರಹೀಂ ಉಜಿರೆ

ಉಡುಪಿ: ಉಡುಪಿ ನಗರದ ಇಂದಿರಾ ನಗರ ವಾರ್ಡ್ ನಲ್ಲಿ ಕೊಳಚೆ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ವಾರ್ಡ್ ನಲ್ಲಿ 400ಕ್ಕೂ ಅಧಿಕ ಮನೆಗಳಿದ್ದು ಜನರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.

ಮುಖ್ಯವಾಗಿ ಇಲ್ಲಿ ಕೊಳಚೆ ನೀರು ತೆರೆದ ತೋಡಿನ ಮೂಲಕ ಹರಿಯುತ್ತಿದ್ದು, ಸುತ್ತಮುತ್ತ ದುರ್ವಾಸನೆ ಜೊತೆಗೆ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಮನೆ ಮಂದಿ ಬಟ್ಟೆ ಒಗೆದ ನೀರು ಇನ್ನಿತರ ಗೃಹೋಪಯೋಗಿ ಬಳಕೆ ನೀರನ್ನು ಪೈಪ್ ಮೂಲಕ ತೋಡಿಗೆ ಬಿಡುತ್ತಿದ್ದು, ತೋಡಿನಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನೆ ಕೇಂದ್ರವಾಗಿದೆ.

ಪರಿಸರದಲ್ಲಿ ಅಸಹ್ಯ ವಾತಾವರಣ ನಿರ್ಮಾಣವಾಗಿದ್ದು ದುರ್ವಾಸನೆ ಬೀರುತ್ತಿದೆ. ಹಲವಾರು ವರ್ಷಗಳಿಂದ ಇಲ್ಲಿ ಸಮಸ್ಯೆ ಇದ್ದರೂ ಈ ತನಕ ಯಾವುದೇ ಜನ ಪ್ರತಿನಿಧಿಯೂ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.

ತೋಡು ಹೂಳೆತ್ತದೆ ವರ್ಷವೇ ಕಳೆದಿದೆ. ಕಸ ಇನ್ನಿತರ ತ್ಯಾಜ್ಯಗಳನ್ನು ತೋಡಿಗೆ ಹಾಕಲಾಗುತ್ತಿದ್ದು ಇದರಿಂದ ಇಲ್ಲಿ ಪರಿಸ್ಥಿತಿ ಕೈ ಮೀರಿದೆ. ಆದಷ್ಟು ಬೇಗ ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

04/03/2022 07:55 pm

Cinque Terre

4.28 K

Cinque Terre

0