ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಳೆಯಂಗಡಿ ಸಸಿಹಿತ್ಲು ಸಂಪರ್ಕ ರಸ್ತೆ ಅವ್ಯವಸ್ಥೆ!!

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂತರಾಷ್ಟ್ರೀಯ ಸಸಿಹಿತ್ಲು ಮುಂಡಾ ಬೀಚ್ ಹಾಗೂ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಸಂಪರ್ಕ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ತ್ರಾಸದಾಯಕವಾಗಿ ಪರಿಣಮಿಸಿದೆ.

ಹಳೆಯಂಗಡಿಯಿಂದ ಸದಾ ವಾಹನ ಸಂಚಾರ ಬ್ಯೂಸಿ ಯಾಗಿರುವ ಈ ರಸ್ತೆ ಕದಿಕೆ ಸೇತುವೆ ಬಳಿ ತೀರಾ ಹದಗೆಟ್ಟಿದ್ದು ಮಾರಣಾಂತಿಕ ಹೊಂಡಗಳಿಂದ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದೆ.

ಮರಳು ಸಾಗಾಟ ಸಹಿತ ಭಾರವಾದ ವಾಹನಗಳು ಸಂಚರಿಸಿ ರಸ್ತೆ ಎಕ್ಕಟ್ಟಿ ಹೋಗಿದ್ದು ಪ್ರಯಾಣಿಕರು ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೆಲವೇ ದಿನಗಳಲ್ಲಿ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀಭಗವತಿ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯಲಿದ್ದು ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಮೊದಲು ರಸ್ತೆ ದುರಸ್ತಿ ಪಡಿಸಬೇಕು ಎಂದು ಸ್ಥಳೀಯರಾದ ಪ್ರವೀಣ್ ಸಸಿಹಿತ್ಲು ಒತ್ತಾಯಿಸಿದ್ದಾರೆ.

ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ರಸ್ತೆ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದ್ದು ರಸ್ತೆ ದುರಸ್ತಿ ಮಾಡಲು ಈಗಾಗಲೇ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗೆ ಸೂಚನೆ ನೀಡಲಾಗಿದೆ ಎಂದರು.

Edited By : Manjunath H D
Kshetra Samachara

Kshetra Samachara

02/03/2022 02:41 pm

Cinque Terre

4.31 K

Cinque Terre

0

ಸಂಬಂಧಿತ ಸುದ್ದಿ