ಮೂಡುಬಿದಿರೆ: ಹೊಸಬೆಟ್ಟು - ಕರಿಂಜೆ ಬಂಟರ ಸಂಘ ಮತ್ತು ಬಿರಾವು ಯುವಬಂಟರ ಗ್ರಾಮ ಸಮಿತಿ ಇವುಗಳ ಜಂಟಿ ಸಭೆಯು ಆದಿತ್ಯವಾರದಂದು ಬಿರಾವು ಸಹೋದರ ಯುವಕ ಮಂಡಲದ ವಠಾರದಲ್ಲಿ ಜರಗಿತು.ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ, ಹೋಟೆಲ್ ಪಂಚರತ್ನ ಇಂಟರ್ ನ್ಯಾಶನಲ್ ನ ಆಡಳಿತ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರಿಂಜೆ ಬಂಟರ ಸಂಘದ ಅಧ್ಯಕ್ಷ ಅದೋಳಿ ವಿಶ್ವನಾಥ ಶೆಟ್ಟಿ, ಮೂಡುಬಿದಿರೆ ಬಂಟರ ಸಂಘದ ಕಾರ್ಯಕಾರಿ ಸದಸ್ಯರಾದ ಹೊಸಬೆಟ್ಟು ಬಾವ ರಮೇಶ ಶೆಟ್ಟಿ, ಕರಿಂಜೆ ಮಜಲೋಡಿ ಹರೀಶ ಶೆಟ್ಟಿ, ಸುರೇಶ ಶೆಟ್ಟಿ ಹಾಗೂ ಕಾರ್ಯದರ್ಶಿ ವಸಂತಿ ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು, ಯುವಬಂಟರ ಸಂಘದ ಅಧ್ಯಕ್ಷ ಕರಿಂಜೆ ದೇರಂದಬೆಟ್ಟು ಪ್ರಸಾದ್ ಶೆಟ್ಟಿ, ಹಿರಿಯರಾದ ರಾಮಣ್ಣ ರೈ, ಉಪಸ್ಥಿತರಿದ್ದರು.
ಹೊಸಬೆಟ್ಟು ಸಂಘದ ಅಧ್ಯಕ್ಷ ಬಾಬು ಶೆಟ್ಟಿಯವರ ಪರವಾಗಿ ರಮೇಶ ಶೆಟ್ಟಿ ಸ್ವಾಗತಿಸಿದರು. ಸುರೇಶ ಶೆಟ್ಟಿ ಪ್ರಸ್ತಾವನೆಯೊಂದಿಗೆ ಉದ್ದೇಶ ಮಂಡಿಸಿದರು.
Kshetra Samachara
01/03/2022 12:59 pm