ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ ವಿಸ್ತರಣೆಗೆ ಜಮೀನು ನೀಡಿದ ಮಾಲೀಕರಿಗೆ ಡಿಆರ್ ಸಿ ನೀಡಲು ಟಿಡಿಆರ್ ಪ್ರಕ್ರಿಯೆ ಚುರುಕು

ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗಾಗಿ ಅಗತ್ಯ ಜಮೀನನ್ನು ಟಿಡಿಆರ್ ಮೂಲಕ ಭೂಮಾಲೀಕರಿಂದ ಐದು ವರ್ಷಗಳ ಹಿಂದೆ ಸ್ವಾಧೀನ ಪಡಿಸಿಕೊಂಡರೂ, ಇನ್ನೂ ಟಿಡಿಆರ್ ನೀಡಿಲ್ಲ.

ಇದೀಗ ಈ ಪ್ರಕ್ರಿಯೆಗೆ ವೇಗ ನೀಡಲಾಗಿದ್ದು, ಭೂಮಾಲೀಕರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಲ್ಲಿ ಜಮೀನು ಒಪ್ಪಿಸಿರುವ ಭೂಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ(ಡಿಆರ್ ಸಿ) ನೀಡಲಾಗುತ್ತದೆ ಎಂದು ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಮಂಗಳೂರು ಮನಪಾ ಸಭಾಂಗಣದಲ್ಲಿ ಮಾತನಾಡಿದ ಅವರು, ಟಿಡಿಆರ್ ಪ್ರಕ್ರಿಯೆಯನ್ನು ತ್ವರಿಗೊಳಿಸಲು ಟಿಡಿಆರ್ ಸೆಲ್ ರಚನೆ ಮಾಡಲಾಗಿದೆ. ಕಾನೂನು ಪ್ರಕ್ರಿಯೆಯಲ್ಲಿ ಟಿಡಿಆರ್ ವಿಳಂಬವಾಗಿರುವುದರಿಂದ ಅಕ್ಟೋಬರ್ ನಲ್ಲಿ ಟಿಡಿಆರ್ ಕಾಯ್ದೆ ಗೆ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಟಿಡಿಆರ್ ನೀಡುವ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ ಎಂದರು.

ಜೊತೆಗೆ ಟಿಡಿಆರ್ ಪ್ರಕ್ರಿಯೆಗೆ ವೇಗ ಕೊಡಲು ಮಹಾನಗರ ಪಾಲಿಕೆ ಯಿಂದ ಮುಂದಿನ ಶುಕ್ರವಾರ ಅದಾಲತ್ ನಡೆಸಲಾಗುತ್ತದೆ.

ಅಂದು ಅರ್ಹ ಜಮೀನು ಭೂಮಾಲೀಕರು ತಮ್ಮ ಅಗತ್ಯ ದಾಖಲಾತಿಯೊಂದಿಗೆ ಮನವಿ ಸಲ್ಲಿಸಿ ಅಭಿವೃದ್ಧಿ ಪ್ರಮಾಣ ಪತ್ರ ಪಡೆಯಬಹುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

Edited By : Shivu K
Kshetra Samachara

Kshetra Samachara

15/02/2022 10:03 am

Cinque Terre

21.55 K

Cinque Terre

1

ಸಂಬಂಧಿತ ಸುದ್ದಿ