ಬಜಪೆ: ಮೂಡಬಿದಿರೆಯಿಂದ ಮಂಗಳೂರು ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಕೈಕಂಬ ಪೇಟೆಯಲ್ಲಿ ಹೆದ್ದಾರಿ ಮಧ್ಯೆ ರಸ್ತೆ ವಿಭಾಜಕದಲ್ಲಿ ಅಳವಡಿಸಲಾಗಿರುವ ಬೀದಿ ದೀಪದಲ್ಲಿ ದೀಪಗಳು ಉರಿಯದೇ ಕಂಬಗಳು ತುಕ್ಕು ಹಿಡಿದಿದ್ದು, ಈಗ ಕೇವಲ ಬಾವುಟ, ಬಂಟಿಂಗ್ಸ್ ಕಟ್ಟಲು ಮಾತ್ರ ಸೀಮಿತವಾಗಿವೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ಮತ್ತು ಪೊಳಲಿ ದೇವಸ್ಥಾನದಂತಹ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಪೇಟೆಯಾಗಿರುವ ಕೈಕಂಬ ಕತ್ತಲೆಯಲ್ಲಿರುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೇಟೆಯ ಹಲವು ವರ್ಷಗಳ ಹಿಂದೆ ರಸ್ತೆ ವಿಭಜಕವನ್ನು ನಿರ್ಮಿಸಿ ಅದರ ಮದ್ಯ ಭಾಗದಲ್ಲಿ ಸುಂದರವಾದ 12 ಬೀದಿ ದೀಪದ ಕಂಬಗಳನ್ನು ಅಳವಡಿಸಲಾಗಿತ್ತು. ಇದು ಪೇಟೆಯ ಅಂದವನ್ನು ಹೆಚ್ಚಿಸಿತ್ತು, ದೀಪಗಳು ಪೇಟೆಯನ್ನು ಬೆಳಗಿದ್ದವು. ಆದರೆ ಇದೀಗ ದೀಪಗಳು ಕೆಟ್ಟು ಹೋಗಿ ಹಲವು ಸಮಯ ಕಳೆದಿದೆ ಕಂಬಗಳು ತುಕ್ಕು ಹಿಡಿದಿದ್ದು ಒಂದು ಕಂಬ ಈಗಾಗಲೇ ತುಂಡಾಗಿದೆ ಇನ್ನುಳಿದವುಗಳು ಸಂಘ ಸಂಸ್ಥೆಗಳಿಗೆ ಬಾವುಟ, ಬಂಟಿಂಗ್ಸ್ ಕಟ್ಟಲು ಸೀಮಿತವಾಗಿವೆ.
ಹೆದ್ದಾರಿಯಲ್ಲಿರುವ ಪ್ರಮುಖ ಪೇಟೆಯಲ್ಲಿನ ದುರಸ್ತಿಯಲ್ಲಿರುವ ಬೀದಿ ದೀಪಗಳನ್ನು ದುರಸ್ಥಿ ಮಾಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
Kshetra Samachara
13/02/2022 09:04 pm