ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: "ಶವ"ದಂತೆ ಮಲಗಿ ವಿಶಿಷ್ಟ ರೀತಿಯಲ್ಲಿ ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ

ಸುರತ್ಕಲ್: ಸುರತ್ಕಲ್, ಎನ್ಐಟಿಕೆ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಆಸೀಫ್ ಆಪತ್ಬಾಂಧವ ರವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯು ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿದೆ.

ಶುಕ್ರವಾರ ಪ್ರತಿಭಟನೆಯ ನಡುವೆ ವಿಶೇಷವಾಗಿ ಶ ವಸಂಸ್ಕಾರ ಮಾಡುವ ರೀತಿಯಲ್ಲಿ ಶವದ ಬಟ್ಟೆ ತೊಟ್ಟು ಧರಣಿ ವೇದಿಕೆಯ ಮುಂದೆ ನಿರ್ಜೀವದಂತೆ ಮಲಗಿದ ಆಸೀಫ್ ಆಪದ್ಬಾಂಧವ ವಿನೂತನವಾಗಿ ಸಾರ್ವಜನಿಕರ ಗಮನ ಸೆಳೆದರು.

ಆಮ್ ಆದ್ಮಿಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ ರಾಜೇಂದ್ರ ಕುಮಾರ್, ಸದಸ್ಯರಾದ ಬೇನೆಟ್, ದಿಲೀಪ್, ಲೋಬೊ, ಚೊಕ್ಕಬೆಟ್ಟು ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಶೈಫಾರ್ ಅಲಿ, ಹಳೆಯಂಗಡಿ ಮಹಿಳಾ ಮಂಡಲ ಅಧ್ಯಕ್ಷೆ ರೇಷ್ಮಾ ಅಶ್ರಫ್, ಉಲ್ಲಾಲ ಯುವ ಜೆಡಿಎಸ್ ಅಧ್ಯಕ್ಷರ ಅಸ್ಫಾಖ್ ಇನೋಲಿ, ಹಳೆಯಂಗಡಿ ಗ್ರಾ ಪಂಸದಸ್ಯರಾದ ಚಂದ್ರಕುಮಾರ್, ಧನರಾಜ್ ಕೋಟ್ಯಾನ್, ಸಮಾಜ ಸೇವಕರಾದ ಮೋಹನ್ ಬಂಗೇರ, ಮೊಹಮ್ಮದ್ ಅಶ್ರಫ್, ನಫೀಶಾ ಹಂಝ ಭಾಗವಹಿಸಿ ಹೋರಾಟವನ್ನು ಬೆಂಬಲಸಿ, ಅಕ್ರಮ ಟೋಲ್ ಗೇಟ್ ವಿರುದ್ಧ ಧಿಕ್ಕಾರ ಕೂಗಿದರು.

Edited By : Manjunath H D
Kshetra Samachara

Kshetra Samachara

12/02/2022 03:12 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ