ಬಜಪೆ:ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿಕಾನಗರ ಎಂಬಲ್ಲಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಸದ ರಾಶಿ ರಾಶಿ ಬಿದ್ದು,ಕೊಳೆತು ಗಬ್ಬುನಾಥ ಬೀರುತ್ತಿತ್ತು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಬಳಿಕವೇ ಸಂಬಂಧ ಪಟ್ಟ ಪಡುಪೆರಾರ ಗ್ರಾಮ ಪಂಚಾಯತ್ ಸಹಕಾರದಲ್ಲಿ ಪರಿಸರದ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಸ್ತೆಯ ಎರಡೂ ಇಕ್ಕೆಲಗಳ ಲ್ಲಿನ ಕೊಳೆತು ನಾರುತ್ತಿದ್ದಂತಹ ಲೋಡ್ ಗಟ್ಟಲೇ ಕಸವನ್ನು ತೆರವು ಮಾಡಿದೆ.
ಈ ಹಿಂದೆ ಕೂಡ ಪಂಚಾಯತ್ ವ್ಯಾಪ್ತಿಯ ಕತ್ತಲ್ ಸಾರ್ ಹಾಗೂ ಕೆಲಕಡೆಗಳಲ್ಲಿ ರಾಶಿ ಬಿದ್ದಿದ್ದ ಕಸದ ಬಗ್ಗೆಯೂ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು.
ರಸ್ತೆಯ ಎರಡೂ ಇಕ್ಕೆಲಗಳ ಲ್ಲಿ ರಾಶಿ ಬಿದ್ದಿದ್ದ ಕಸವನ್ನು ತೆರವು ಮಾಡಿದ ನಂತರ ಪಂಚಾಯತ್ ನ ವತಿಯಿಂದ ಅಲ್ಲಲ್ಲಿ ಕಸ ಎಸೆಯದಂತೆ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ.ಅಲ್ಲದೆ ಕಸ ಎಸೆದುಹೋಗುವವರ ವಿರುದ್ದ ಕಠಿಣ ಕ್ರಮಕ್ಕೆ ಪಂಚಾಯತ್ ಮುಂದಾಗಿದ್ದು,ಕಸ ಅಥವಾ ತ್ರಾಜ್ಯ ಸುರಿಯುವುದು ಕಂಡು ಬಂದಲ್ಲಿ 5000 ದಂಡ ಹಾಗೂ ಈ ಬಗ್ಗೆ ದೂರು ದಾಖಲಿಸಲು ಪಂಚಾಯತ್ ಮುಂದಾಗಿದೆ.
Kshetra Samachara
12/02/2022 10:08 am