ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಅಪಘಾತ ವಲಯ ಬಳಿಯ ಫ್ಲೆಕ್ಸ್ ತೆರವುಗೊಳಿಸಲು ಆಗ್ರಹ

ಮುಲ್ಕಿ: ಮುಲ್ಕಿ ತಾಲೂಕು ನಾಗರಿಕ ಅಭಿವೃದ್ಧಿ ಸಮಿತಿ ಸಭೆ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಹರೀಶ್ ಪುತ್ರನ್ ಮಾತನಾಡಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ಅನೇಕ ಅಪಘಾತಗಳು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಮುಲ್ಕಿ ವಿಜಯ ಸನ್ನಿಧಿ, ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಬಳಿ "ಶುಭ ಕೋರುವ ಫ್ಲೆಕ್ಸ್" ಗಳನ್ನು ಅಳವಡಿಸಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ

ಫ್ಲೆಕ್ಸ್ ತೆರವುಗೊಳಿಸುವಂತೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ತೆರವು ಗೊಂಡಿಲ್ಲ ಎಂದರು.

ಇದಕ್ಕೆ ಸಮಿತಿಯ ಜೀವನ್ ಶೆಟ್ಟಿ ಕಾರ್ನಾಡು ಧ್ವನಿಗೂಡಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅನೇಕ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ ಕಾರ್ಯಗತಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಗಮನಹರಿಸಿ ಕೂಡಲೇ ಫ್ಲೆಕ್ಸ್ ತೆರವು ಗೊಳಿಸಬೇಕು ಇಲ್ಲದಿದ್ದರೆ ಈ ಬಗ್ಗೆ ತೀವ್ರ ಹೋರಾಟ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

ಸಮಿತಿಯ ಇಕ್ಬಾಲ್ ಮುಲ್ಕಿ ಮಾತನಾಡಿ ಮುಲ್ಕಿ ನಗರ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಾಗಿ ಉಳಿದಿದ್ದು ಈ ಬಗ್ಗೆ ಸಂಬಂಧಪಟ್ಟವರ ಗಮನ ಹರಿಸಲು ಒತ್ತಾಯಿಸಿದರು.

ಸಮಿತಿಯು ಸುರತ್ಕಲ್ ಅವೈಜ್ಞಾನಿಕ ಟೋಲ್ ವಸೂಲಾತಿ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿ ಸಭೆಯಲ್ಲಿ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಕೂಡಲೇ ಸರಕಾರವು ಗಮನಹರಿಸಿ ಸುರತ್ಕಲ್ ಟೋಲ್ ಗೇಟನ್ನು ರದ್ದುಪಡಿಸುವಂತೆ ಹಾಗೂ ಮುಲ್ಕಿ ಪೂರ್ಣ ಪ್ರಮಾಣವಾಗಿ ತಾಲೂಕು ರಚನೆಯಾಗಿಲ್ಲ ಹಾಗೂ ತಾಲೂಕು ಕಚೇರಿ ಬಗ್ಗೆ ಕೂಡಲೇ ಶಾಸಕರು ಗಮನಹರಿಸಬೇಕು ಎಂದು ಒತ್ತಾಯಿಸಿತು .

ಸಮಿತಿಯ ಪ್ರಶಾಂತ್ ಮಾತನಾಡಿ ಮುಲ್ಕಿ ನ.ಪಂ. ವ್ಯಾಪ್ತಿಯ ಕೊಲ್ನಾಡು ಕೈಗಾರಿಕಾ ಪ್ರದೇಶದ ಅವ್ಯವಸ್ಥೆಗಳ ಬಗ್ಗೆ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಯಿತು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಸಮಿತಿಯ ಅಶೋಕ್ ಶೆಟ್ಟಿ, ಮಧು ಆಚಾರ್ಯ, ಗೋಪಿನಾಥ ಪಡಂಗ, ಯೋಗೀಶ್ ಕೋಟ್ಯಾನ್,ಶಶಿ ಅಮೀನ್, ಮೋಹನ್ ಕೋಟ್ಯಾನ್, ನೂರುಲ್ಲಾ ಕಾರ್ನಾಡ್, ಸುಶೀಲ್ ಮತ್ತಿತರರು ಮಾತನಾಡಿದರು.

Edited By : Nagaraj Tulugeri
Kshetra Samachara

Kshetra Samachara

08/02/2022 10:25 pm

Cinque Terre

10.03 K

Cinque Terre

1