ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಶೂನ್ಯ ತ್ಯಾಜ್ಯ ಕ್ಯಾಂಪಸ್ ನತ್ತ ಪುರಸಭೆ ಚಿತ್ತ

ಮೂಡುಬಿದಿರೆ: ಕಸ ಕಸ ಕಸ ಎಲ್ಲೆಂದರಲ್ಲಿ ಕಸಗಳದ್ದೇ ರಾಶಿ. ಕಸ ವಿಲೇವಾರಿ ಮಾಡುವುದೆ ಒಂದು ದೊಡ್ಡ ಸವಾಲಿನ ಕೆಲಸ. ಜನರಿಗೆ ಎಷ್ಟು ಮಾಹಿತಿ ನೀಡಿದರೂ, ಕಸವಿಂಗಡಸಿ ಸಂಗ್ರಹಿಸುವುದು ಪುರಸಭೆಗೂ ಸವಾಲಿನ ಕೆಲಸ. ಈ ಎಲ್ಲಾ ಸಮಸ್ಯೆಗೆ ಮೂಡುಬಿದಿರೆ ಪುರಸಭೆ ಹೊಸ ಯೋಜನೆಗೆ ಕೈ ಹಾಕಿದೆ. ಅಷ್ಟಕ್ಕೂ ಏನಿದು ಹೊಸ ಯೋಜನೆ ಅಂತೀರಾ ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಮೂಡುಬಿದಿರೆ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ನಿರ್ವಹಣೆಯನ್ನು ಜಾರಿಗೊಳಿಸಬೇಕು ಎನ್ನುವ ಉದ್ದೇಶದಿಂದ ಪುರಸಭೆಯು ‘ಶೂನ್ಯ ತ್ಯಾಜ್ಯ ಕ್ಯಾಂಪಸ್’ ಎನ್ನುವ ಯೋಜನೆಯನ್ನು ತಂದಿದೆ. ಈ ಯೋಜನೆಯ ಪ್ರಕಾರ ಕಸ ಸಂಗ್ರಹ ಮಾಡುವ ವೇಳೆಯಲ್ಲಿ ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಹಾಕುವ ಪರ್ಯಾಯವನ್ನು ಅನುಷ್ಠಾನಗೊಳಿಸಲಾಗಿದೆ. ಮೂಡುಬಿದಿರೆ ಪರಿಸರದಲ್ಲಿಯೇ ಮೊಟ್ಟ ಮೊದಲ ಯೋಜನೆ ಇದಾಗಿದ್ದು, ಸಾರ್ವಜನಿಕರೊಂದಿಗೆ ವಿದ್ಯಾರ್ಥಿಗಳಲ್ಲೂ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಪರಿ ಇದಾಗಿದೆ.

ಘನತ್ಯಾಜ್ಯ ನಿರ್ವಹಣೆಗೆ 23 ವಾರ್ಡ್‌ಗಳಲ್ಲಿ ಆಯಾ ವಾರ್ಡ್ಗಳಲ್ಲಿ ಸ್ಥಾಪನೆಗೊಳ್ಳಲಿದ್ದು, ಮಾಲಿನ್ಯವನ್ನು ತಡೆಗಟ್ಟುವಿಕೆಯಲ್ಲಿ ಇದು ಸಹಕಾರಿಯಾಗಲಿದೆ. ಲೇನ್ ಕಾಂಪೋಸ್ಟರ್ ಹಾಗೂ ಒಣ ಎಲೆಗಳನ್ನು ಗೊಬ್ಬರ ಮಾಡುವ, ಲೀಫ್ ಕಾಂಪೋಸ್ರ‍್ಗಳನ್ನು ಅಳವಡಿಸುವ ಮತ್ತು ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರಿಸುವ, ಒಣ ತ್ಯಾಜ್ಯವನ್ನು ವಿಂಗಡಿಸಿ ಶೇಖರಿಸುವ ಕೇಂದ್ರ ಇದಾಗಲಿದೆ. ಬೆಂಗಳೂರಿನ ವೇದನ್ ಟ್ರಸ್ಟ್ ಸಹಯೋಗದಲ್ಲಿ ಯೋಜನೆಯನ್ನು ರೂಪಿಸಲಾಗಿದೆ.

ಪುರಸಭೆ ವ್ಯಾಪ್ತಿಯಾದ್ಯಂತ ಮನೆಗಳು, ಹೊಟೇಲುಗಳು, ಅಂಗಡಿ-ಕಚೇರಿಗಳಲ್ಲಿ ಸೇರಿದಂತೆ ಹಲವೆಡೆಗಳಲ್ಲಿನ ಘನತ್ಯಾಜ್ಯಗಳನ್ನು ಟ್ರಾಲಿ ಮುಖಾಂತರ ಕಸ ವಿಗಂಡನೆ ಮಾಡವ ತಂತ್ರ ರೂಪಿಸಿದೆ. ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ತುಂಬಿಸಲು ಬೇಕಾದ ಮೂರು ಪ್ರತ್ಯೇಕ ಬ್ಯಾಗ್‌ಗಳನ್ನು ಟ್ರಾಲಿಯಲ್ಲಿ ಅಳವಡಿಸಲಾಗಿದೆ.

ಈ ಯೋಜನೆಯನ್ನು ಸಾಕಾರಗೊಳಿಸಲು ಪ್ರತಿಯೊಂದು ಶಾಲಾ ಕಾಲೇಜುಗಳ ಕ್ಯಾಂಪಸ್‌ಗಳಿಗೆ ಹೋಗಿ ಅಲ್ಲಿಯ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೂ ಸ್ವಯಂ ಜಾಗೃತಿ ಮೂಡಿಸುವ ಕೆಲಸ ಕೂಡ ಪುರಸಭೆಯಿಂದ ನಡೆಯುತ್ತಿದೆ.

ಪುರಸಭೆಯು ಶೂನ್ಯ ತ್ಯಾಜ್ಯ ಕ್ಯಾಂಪಸ್ ಯೋಜನೆಯಿಂದ ಸ್ವಚ್ಛ ಜಾಗೃತಿ ಪರಿಕಲ್ಪನೆಯನ್ನು ಜನರಲ್ಲಿ ಮೂಡಿಸುತ್ತಿದೆ. ಹೀಗೆ ಹಲವಾರು ರೀತಿಯಲ್ಲಿ ಕಸ ವಿಂಗಡನೆಯ ಬಗ್ಗೆ ಮೂಡುಬಿದಿರೆ ಪುರಸಭೆಯು ಉತ್ತಮ ಹೆಜ್ಜೆಯನ್ನು ಇಟ್ಟಿದ್ದು, ಜನರು ಇದಕ್ಕೆ ಸರಿಯಾದ ಸಹಕಾರ ನೀಡಲಿ ಎನ್ನುವುದೇ ನಮ್ಮ ಆಶಯ.

ವೈಶಾಲಿ ಶೆಟ್ಟಿ, ಪೂವಾಳ

Edited By : Nagesh Gaonkar
Kshetra Samachara

Kshetra Samachara

07/02/2022 10:16 pm

Cinque Terre

8.52 K

Cinque Terre

0

ಸಂಬಂಧಿತ ಸುದ್ದಿ