ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪೆರಾರ :ಬೃಹತ್ ಸ್ವಚ್ಛತಾ ಅಭಿಯಾನ, ಲೋಡ್‍ಗಟ್ಟಲೆ ಕಸ ಸಂಗ್ರಹ

ಬಜಪೆ :ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಪದವುನಿಂದ ಬಜ್ಪೆ ತನಕದ ಸುಮಾರು ಎರಡು ಕಿಮೀ ರಸ್ತೆಯ ಎರಡೂ ಅಂಚುಗಳಲ್ಲಿ ರಾಶಿ ಬಿದ್ದಿದ್ದ ಲೋಡ್‍ಗಟ್ಟೆಲೆ ತ್ಯಾಜ್ಯವನ್ನು ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಸ್ವಚ್ಚಗೊಳಿಸಿದರು.

ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯ ಅವರ ನೇತೃತ್ವದಲ್ಲಿ ನಡೆದ `ಸ್ವಚ್ಛತಾ ಅಭಿಯಾನ'ದಲ್ಲಿ ಪಡುಪೆರಾರ ಜೈ ಹಿಂದ್ ಫ್ರೆಂಡ್ಸ್ ಕ್ಲಬ್(ರಿ) ಮತ್ತು ಇತರ ಸಂಘಗಳ 100ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಸ್ವಚ್ಚತೆಯಲ್ಲಿ ಕೈಜೋಡಿಸಿದ್ದರು.

ಸ್ವಚ್ಛತಾ ಅಭಿಯಾನದಲ್ಲಿ ಪಂಚಾಯತ್ ಸದಸ್ಯ ಅರುಣ್ ಕೋಟ್ಯಾನ್, ಕ್ಲಬ್‍ನ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್, ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಭರತ್ ಮತ್ತಿತರರು ಇದ್ದರು. ಕಾರ್ಯಾಚರಣೆ ವೇಳೆ ರಸ್ತೆ ಬದಿಯಿಂದ ಒಟ್ಟು 10 ಟ್ರಕ್ ಲೋಡ್ ತ್ಯಾಜ್ಯ ಸಂಗ್ರಹಿಸಲಾಯಿತು.

ರಸ್ತೆಯ ಅಂಚುಗಳ ಲ್ಲಿ ಕಸದ ರಾಶಿ ಕೊಳೆತು ದುರ್ನಾತ ಬಿರುತ್ತಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಪ್ರಕಟವಾಗಿತ್ತು.

Edited By :
Kshetra Samachara

Kshetra Samachara

07/02/2022 04:43 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ