ಮುಲ್ಕಿ: ಕಿನ್ನಿಗೋಳಿ ಮುಂಡ್ಕೂರು ರಾಜ್ಯ ಹೆದ್ದಾರಿಯ ಜಾರಿಗೆ ಕಟ್ಟೆ ಸರ್ಕಲ್ ಬಳಿ ಕಳೆದ ಕೆಲವು ತಿಂಗಳಿನಿಂದ ಬ್ಯಾರಿ ಕೇಡ್ ನಿಂದ ರಸ್ತೆ ತಡೆ ನಿರ್ಮಿಸಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಅವಿಭಾಜಿತ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಜಾರಿಗೆ ಕಟ್ಟೆ ಸರ್ಕಲ್ ಬಳಿ ಕಳೆದ ಕೊರೋನಾ ದಿನಗಳಲ್ಲಿ ಬ್ಯಾರಿಕೇಡ್ ಮೂಲಕ ಕಾರ್ಕಳ ಗ್ರಾಮಾಂತರ ಪೊಲೀಸರು ರಸ್ತೆ ತಡೆ ಮಾಡಿದ್ದು ಇದೀಗ ಗಡಿಭಾಗದ ರಸ್ತೆಸಂಚಾರ ತೆರವಾಗಿದ್ದರೂ ಜಾರಿಗೆ ಕಟ್ಟೆ ಬಳಿಯಲ್ಲಿ ರಸ್ತೆ ತಡೆ ಹಾಗೆ ಇದೆ.
ಕೊಡ್ಯಡ್ಕ ಮೂಡಬಿದ್ರೆ ಕಡೆಯಿಂದ ಕಿನ್ನಿಗೋಳಿಗೆ ಕಡೆಗೆ ಬರುವ ವಾಹನಗಳು ಹಾಗೆಯೇ ಕಿನ್ನಿಗೊಳಿ ಕಡೆಯಿಂದ ಮೂಡಬಿದ್ರೆ ಕಡೆಗೆ ಹೋಗುವ ವಾಹನಗಳ ಚಾಲಕರು ಜಾರಿಗೆ ಕಟ್ಟೆ ಸರ್ಕಲ್ ಬಳಿ ಬ್ಯಾರಿಕೇಡರ್ ರಸ್ತೆ ತಡೆಯಿಂದ ಏಕಾಏಕಿ ಗಲಿಬಿಲಿ ಕೊಳ್ಳುತ್ತಿದ್ದು ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ರಾತ್ರಿ ಪ್ರಯಾಣ ದುಸ್ತರವಾಗಿದೆ.
ಕೂಡಲೇ ಕಾರ್ಕಳ ಗ್ರಾಮಾಂತರ ಪೊಲೀಸರು ಈ ಬಗ್ಗೆ ಗಮನಹರಿಸಿ ಕೂಡಲೇ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
06/02/2022 03:05 pm