ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : " ನಮ್ಮ ಶಾಲೆಯನ್ನು ರಿಪೇರಿ ಮಾಡಿಸಿ ಅನಾಹುತ ತಪ್ಪಿಸಿ " ವಿದ್ಯಾರ್ಥಿಗಳ ಅಳಲು!

ವರದಿ: ರಹೀಂ ಉಜಿರೆ

ಕೋಟೇಶ್ವರ: ಒಂದು ಕಡೆ ಕುಸಿದು ಹೋದ ಗೋಡೆ, ತುಂಡಾಗಿ ಬಿದ್ದ ಬಾಗಿಲು, ಕಿಟಕಿ, ಹೆಂಚಿನ ತುಂಡುಗಳು.. ಇದೇ ಕಟ್ಟಡದ ಮತ್ತೊಂದು ಕಡೆ ಪಾಠ ಕೇಳ್ತಾ ಇರುವ ಪುಟ್ಟ ಮಕ್ಕಳು.. ಈ ರೀತಿ ದೊಡ್ಡ ಅಪಾಯವನ್ನು ಎದುರು ನೋಡ್ತಾ ಇರುವುದು ಉಡುಪಿಯ ಕೋಟೇಶ್ವರ ಸರ್ಕಾರಿ ಪಬ್ಲಿಕ್ ಸ್ಕೂಲ್. ಸುಮಾರು 110 ವರ್ಷಗಳ ಹಿಂದೆ ನಿರ್ಮಾಣವಾದ ಈ ಶಾಲೆಯಲ್ಲಿ ಹನ್ನೊಂದನೇ ತರಗತಿಯವರೆಗೂ ಒಟ್ಟು ಐನೂರ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಯ ಈ ಕಟ್ಟಡ ಕುಸಿದು ವರ್ಷ ಕಳೆದರೂ ಇನ್ನೂ ಕಟ್ಟಡವನ್ನು ಸರಿಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿಲ್ಲ.

ಈ ಶಾಲೆಯಲ್ಲಿ ಒಟ್ಟು ಹದಿನೇಳು ಕೊಠಡಿಗಳಿದ್ದು 6 ಕೊಠಡಿಗಳು ಶಿಥಲಾವಸ್ಥೆಗೆ ತಲುಪಿ ಎರಡು ಕೊಠಡಿಗಳು ನೆಲಕ್ಕುರುಳಿವೆ. ಹೀಗೆ ಕುಸಿದ ಕಟ್ಟಡದ ಪಕ್ಕದ ತರಗತಿಯಲ್ಲೇ ವಿದ್ಯಾರ್ಥಿಗಳು ಅಪಾಯದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

ಸದ್ಯ ಈ ಕೊಠಡಿಯಲ್ಲಿ ಇದ್ದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪಕ್ಕದ ಹೈಸ್ಕೂಲಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಈ ಕುಸಿದ ಕಟ್ಟಡದಲ್ಲೇ ಉಳಿದ ಆರು ತರಗತಿಗಳಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕದಲ್ಲೇ ದಿನದೂಡುವಂತಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಕಟ್ಟಡದ ಸಮಸ್ಯೆ ಜೊತೆಗೆ ಶಿಕ್ಷಕರ ಕೊರತೆಯನ್ನೂ ಈ ಶಾಲೆ ಎದುರಿಸುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಮುಂದೆ ಆಗಬಹುದಾದ ದೊಡ್ಡ ಗಂಡಾಂತರ ತಪ್ಪಿಸಬೇಕಿದೆ.

Edited By : Shivu K
Kshetra Samachara

Kshetra Samachara

29/01/2022 04:19 pm

Cinque Terre

10.21 K

Cinque Terre

1

ಸಂಬಂಧಿತ ಸುದ್ದಿ