ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕಡಲಬ್ಬರ ಹೆಚ್ಚಳ; ಪೊಲಿಪು ತೀರ ಅಪಾಯದಲ್ಲಿ, ಜನ ಕಳವಳ

ಕಾಪು: ಸಮುದ್ರ ಕೊರತಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಹಳೆಯ ತಡೆಗೋಡೆ ತೆರವುಗೊಳಿಸಿರುವುದರಿಂದ ಕಾಪು ಪುರಸಭೆ ವ್ಯಾಪ್ತಿಯ ಪೊಲಿಪು ಪಡು ಭಾಗದ ನಿವಾಸಿಗಳಿಗೆ ಕಡಲ್ಕೊರೆತ ಭೀತಿ ಉಂಟಾಗಿದೆ.

ಕಳೆದ ಮಳೆಗಾಲ ಸಂದರ್ಭ ತಡೆಗೋಡೆ ನಿರ್ಮಿಸುವಂತೆ ಜನರು, ಜನಪ್ರತಿನಿಧಿಗಳಿಗೆ ಒತ್ತಡ ಹೇರಿದ್ದರು. ಶಾಸಕ, ಸಂಸದರು, ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣದ ಭರವಸೆ ನೀಡಿದ್ದರು. ಅನುದಾನ ಮಂಜೂರಾಗದೆ ಮುಂಚಿತ ಕಾಮಗಾರಿ ನಡೆಸಲು ಇಲಾಖೆ ಹಾಗೂ ಗುತ್ತಿಗೆದಾರರು ಹಿಂದೇಟು ಹಾಕಿದ ಪರಿಣಾಮ ಅದು ನನೆಗುದಿಗೆ ಬಿದ್ದಿದೆ.

4 ತಿಂಗಳ ಹಿಂದೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಶೀಘ್ರ ತಡೆಗೋಡೆ ನಿರ್ಮಾಣದ ಭರವಸೆ ನೀಡಿದ್ದರು. ಅವರು ನೀಡಿದ ಭರವಸೆಯಂತೆ ಕಾಮಗಾರಿಗೆ ಮುಂದಡಿ ಇಡಲಾಗಿತ್ತು. ಆದರೆ, ರಸ್ತೆ ನಿರ್ಮಾಣಕ್ಕೆ ಖಾಸಗಿ ಜಮೀನಿನವರು ಅವಕಾಶ ನೀಡದ ಕಾರಣ ಗುತ್ತಿಗೆದಾರರೊಬ್ಬರು ಈ ಹಿಂದೆ ನಿರ್ಮಿಸಿರುವ ತಡೆಗೋಡೆಯನ್ನೇ ಕೆಡವಿ ರಸ್ತೆ ನಿರ್ಮಿಸಿದ್ದರು. ಇದೀಗ ಕಡಲಿನ ಅಬ್ಬರ ಹೆಚ್ಚಾಗುತ್ತಿದ್ದು, ಕೊರೆತದ ಭೀತಿ ಕಾಡುತ್ತಿದೆ.

ಪರಿಸರದಲ್ಲಿ 20ಕ್ಕೂ ಅಧಿಕ ಮನೆಗಳಿದ್ದು, ಕೆಲವಂತೂ ತೀರಾ ಅಪಾಯವನ್ನೆದುರಿಸುತ್ತಿದೆ. ಇನ್ನೇನು ಮೂರ್‍ನಾಲ್ಕು ತಿಂಗಳೊಳಗೆ ಮಳೆಗಾಲ ಆರಂಭವಾಗಲಿದ್ದು, ಅದಕ್ಕಿಂತ ಮೊದಲು ತಡೆಗೋಡೆ ಕಾಮಗಾರಿ ನಡೆಯದಿದ್ದಲ್ಲಿ ತೀರ ಪ್ರದೇಶಗಳು ಕಡಲ್ಕೊರೆತಕ್ಕೆ ಸಿಲುಕಲಿದೆ. ಆದಷ್ಟು ಶೀಘ್ರ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/01/2022 01:47 pm

Cinque Terre

10.16 K

Cinque Terre

0

ಸಂಬಂಧಿತ ಸುದ್ದಿ