ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಗಾರದ ರಸ್ತೆಗೆ ಸ್ವಾಗತ-ಬ್ಯಾನರ್ ಮೂಲಕ ಸಾರ್ವಜನಿಕರ ಆಕ್ರೋಶ !

ಪೆರಂಪಳ್ಳಿ: ಮಣಿಪಾಲ ಪೆರಂಪಳ್ಳಿ ರಸ್ತೆ ನಿರ್ಮಾಣ ಕಾಮಗಾರಿ ತುಂಬ ವರ್ಷಗಳಿಂದ ನಡೆಯುತ್ತಲೇ ಇದೆ.ಒಂದಲ್ಲೊಂದು ಕಾರಣಕ್ಕೆ ಸ್ಥಗಿತಗೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭವಾಗುತ್ತಾ ಸಾಗಿದೆ.ಪೆರಂಪಳ್ಳಿ ಭಾಗದಲ್ಲಿ ಈ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.ಮಳೆಗಾಲದಲ್ಲಿ ಕೆಸರು ನೀರಿನಿಂದ ಬೇಸತ್ತ ಜನ ಈಗ ಧೂಳಿನಿಂದ ಕಂಗೆಟ್ಟಿದ್ದಾರೆ.ಜಲ್ಲಿ ಹುಡಿ ಮತ್ತು ಕೆಂಪುಮಣ್ಣಿನ ಧೂಳಿನ ಸಮಸ್ಯೆಗೆ ಮುಕ್ತಿಯೇ ಇಲ್ಲ.

ಇದೇ ಭಾಗದ ಶೀಂಬ್ರಾ ಕೊಳಲಗಿರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ,ಜನರು ಹಾಕುರುವ ಬ್ಯಾನರ್ ಗಮನ ಸೆಳೆಯುತ್ತಿದೆ.

" ಬಂಗಾರದ ರಸ್ತೆಗೆ ಸ್ವಾಗತ : ಧೂಳು ಉಚಿತ, ಎದ್ದು ಬೀಳುವುದು ಖಚಿತ, ಇನ್ನು ಈ ರಸ್ತೆಗೆ ಮುಕ್ತಿ ನೀಡದೇ ಹೋದರೆ ನಮ್ಮ ಮತ ನೋಟ ಖಚಿತ" ಎಂದು ಬ್ಯಾನರ್ ನಲ್ಲಿ ವ್ಯಂಗ್ಯವಾಗಿ ಬರೆಯುವ ಮೂಲಕ ರಸ್ತೆ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

22/01/2022 05:16 pm

Cinque Terre

27.43 K

Cinque Terre

2

ಸಂಬಂಧಿತ ಸುದ್ದಿ