ನಂಚಾರು: ಶ್ರೀ ಕಾಮಧೇನು ಗೋ ಶಾಲಾ ಮಹಾ ಸಂಘ ಟ್ರಸ್ಟ್ ವತಿಯಿಂದ 6 ಎಕರೆ ಪ್ರದೇಶದಲ್ಲಿ ಗೋ ಶಾಲೆ ನಿರ್ಮಾಣವಾಗಲಿದ್ದು ಜ.24 ರಂದು ಪ್ರಥಮ ಚರಣದ ಉದ್ಘಾಟನೆ ನಡೆಯಲಿದೆ ಎಂದು ಟಸ್ಟ್ ನ ಅಧ್ಯಕ್ಷ ರಾಜೇಂದ್ರ ಚಕ್ಕೇರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ ಸುಮಾರು 6 ಎಕರೆ ಜಾಗದಲ್ಲಿ ಅನಾಥ ಹಾಗೂ ಅಪಘಾತಕ್ಕೀಡಾದ ಗೋವುಗಳಿಗೆ ಆಶ್ರಯತಾಣ ಹಾಗೂ ಸುಸಜ್ಜಿತ ಚಿಕಿತ್ಸಾಲಯವನ್ನು ನಿರ್ಮಿಸಲು ಯೋಜಿಸಿದ್ದೇವೆ.
ಡಿಸೆಂಬರ್ 27 ರಂದು ಶೃಂಗೇರಿ ಮಹಾಸಂಸ್ಥಾನದ ಪೀಠಾಧಿಪತಿಗಳ ಆಶೀರ್ವಾದದೊಂದಿಗೆ ಅಲ್ಲಿಯ ಆಡಳಿತಾಧಿಕಾರಿಗಳಾದ ಗೌರಿಶಂಕರ್ ಇವರಿಂದ ಶಂಕುಸ್ಥಾಪನೆಗೊಂಡಿದ್ದು ಇದೀಗ ಗೋ ಶಾಲೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಜ.24 ರಂದು ಇದರ ಉದ್ಘಾಟನೆ ನಡೆಯಲಿದೆ.
ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್ ಗೌರಿ ಶಂಕರ್, ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಸಚಿವ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
Kshetra Samachara
22/01/2022 01:08 pm