ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಸಮುದ್ರ ತೀರ ಪ್ರದೇಶದಲ್ಲಿ ಮುಂಬೈ ಉದ್ಯಮಿಯೊಬ್ಬರು ರೆಸಾರ್ಟ್ ನಿರ್ಮಾಣ ಮಾಡಲು ಶಾಶ್ವತ ತಡೆಗೋಡೆಯನ್ನು ಏಕಾಏಕಿ ಕೆಡವಿದ್ದಾರೆ ಎಂದು ಸ್ಥಳೀಯ ಪಂಚಾಯತ್ ಸದಸ್ಯ ಧನರಾಜ್ ಸಸಿಹಿತ್ಲು ಆರೋಪಿಸಿದ್ದಾರೆ
ಸಸಿಹಿತ್ಲು ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಯಲು ಕಳೆದ ವರ್ಷಗಳ ಹಿಂದೆ ಮಾಜಿ ಸಚಿವರ ನೇತೃತ್ವದಲ್ಲಿ ತಡೆಗೋಡೆಯನ್ನು ನಿರ್ಮಿಸಿದ್ದು ಮುಂಬೈ ಉದ್ಯಮಿಯೊಬ್ಬರು ರೆಸಾರ್ಟ್ ಮಾಡುವ ನೆಪದಲ್ಲಿ ಏಕಾಏಕಿ ಜೆಸಿಬಿ ಮೂಲಕ ಕೆಡವಿದ್ದಾರೆ ಎಂದು ಧನರಾಜ್ ಸಸಿಹಿತ್ಲು ಪಂಚಾಯಿತಿಗೆ ದೂರು ನೀಡಿದ್ದಾರೆ.
ಕೂಡಲೇ ಹಳೆಯಂಗಡಿ ಪಂಚಾಯತ್ ಅಧ್ಯಕ್ಷರು ಈ ಬಗ್ಗೆ ಕ್ರಮ ಕೈಗೊಂಡು ಕಾಮಗಾರಿ ನಿಲ್ಲಿಸಿದ್ದಾರೆ. ಈ ಬಗ್ಗೆ ಬಂದರು ಮತ್ತು ಮೀನುಗಾರಿಕಾ ವಿಭಾಗ ಸಹಾಯಕ ಇಂಜಿನಿಯರ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಕಡಲ್ಕೊರೆತ ತಡೆಯಲು ನಿರ್ಮಾಣಗೊಂಡ ತಡೆಗೋಡೆ ಕೆಡವಿದ ಬಗ್ಗೆ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
Kshetra Samachara
22/01/2022 09:41 am