ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಾಯತ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ ಹಿನ್ನೆಲೆ ಪ್ರತಿಭಟನೆಗೆ ಮುಂದಾದ ದಲಿತ ಸಂಘಟನೆ

ಸುಳ್ಯ.ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ಚಾಲಕ ಕಂ. ಸ್ವಚ್ಚತಗಾರನ ನೆಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಸೀತಾರಾಮ ಎಂಬವರನ್ನು ಸೇವೆಯಿಂದ ವಜಾಗೊಳಿಸಿದ ಗ್ರಾಮ ಪಂಚಾಯತ್ ಆಡಳಿತ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸುಳ್ಯ, ವಿವಿಧ ದಲಿತ ಸಂಘಟನೆಗಳು ಹಾಗೂ ಸಮಾನ ಮನಸ್ಕರ ಸಹಯೋಗದಲ್ಲಿ ಇಂದು ಬೆಳ್ಳಾರೆ ಗ್ರಾಮಸಭೆ ನಡೆಯುವ ರಾಜೀವ್ ಗಾಂಧಿ ಸೇವಾ ಕೇಂದ್ರದ ಎದುರು ಪ್ರತಿಭಟನೆಗೆ ಮುಂದಾಗಿದ್ದರು.

ಪ್ರತಿಭಟನೆ ಹಿಂಪಡೆಯುವಂತೆ ಸ್ಥಳಕ್ಕೆ ಬಂದ ಬೆಳ್ಳಾರೆ ಪೊಲೀಸ್ ಠಾಣೆ ಎಸ್. ಐ. ಆಂಜನೇಯರೆಡ್ಡಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ದಲಿತ ಮುಖಂಡ ಆನಂದ ಬೆಳ್ಳಾರೆಯವರು ಇದಕ್ಕೆ ಒಪ್ಪದೇ ಸೀತಾರಾಮ ರವರಿಗೆ ಅನ್ಯಾಯ ಆಗಿದೆ. ನಮಗೆ ನ್ಯಾಯ ಕೊಡ್ಸಿ ಎಂದು ಮನವಿ ಮಾಡಿದರು.

ಬಳಿಕ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಯವರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಂದು ಘಟನೆಯ ಬಗ್ಗೆ ಸಮರ್ಥನೆ ನೀಡಿದರು. ಆದರೆ ಇದಕ್ಕೆ ಒಪ್ಪದೇ ಅನಿಲ್ ರೈ ಮತ್ತಿತರರು ಬಂದು ಗ್ರಾಮ ಸಭೆ ನೀವು ನಡೆಸಿ, ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಅಲ್ಲದೇ ಬ್ಯಾನರ್ ಫಲಕ ಹಿಡಿದುಕೊಂಡರು.

ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಹಾಗೂ ಪಂಚಾಯತ್ ನವರು ಮನವೊಲಿಸಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಬಳಿಕ ಇಂದು ನಡೆಯಬೇಕಾಗಿದ್ದ ಗ್ರಾಮ ಸಭೆ ಆರಂಭಗೊಂಡಿತು .

Edited By : Nirmala Aralikatti
Kshetra Samachara

Kshetra Samachara

21/01/2022 02:57 pm

Cinque Terre

3.86 K

Cinque Terre

0