ಕುಂದಾಪುರ: ರಾಜ್ಯಾದ್ಯಂತ ಅಂಗನವಾಡಿ ನೌಕರರು ಇಂದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹ ನಡೆಸಿ, ಮನವಿ ಪತ್ರಗಳನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಕುಂದಾಪುರ ಉಪ ತಹಶೀಲ್ದಾರ್ ಅವರಿಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕುಂದಾಪುರ ತಾಲೂಕು ಸಮಿತಿಯು ಸಿಐಟಿಯು ನೇತೃತ್ವದಲ್ಲಿ ಮನವಿ ನೀಡಲಾಯಿತು.
ಈ ಸಂದರ್ಭ ಸಂಘದ ತಾಲೂಕು ಅಧ್ಯಕ್ಷರಾದ ಬಿ.ಆಶಾಲತಾ ಶೆಟ್ಟಿ, ತಾಲೂಕು ಕಾರ್ಯದರ್ಶಿ ಶಾಂತಾ, ಕೋಶಾಧಿಕಾರಿ ಭಾಗ್ಯ ಎಸ್., ಸಬಿತಾ ಶೆಟ್ಟಿ, ಸುಮಾ, ಮೇರಿ, ಅಕ್ಕಣಿ, ಪ್ರೇಮಾ, ಸಿಐಟಿಯು ತಾಲೂಕು ಸಂಚಾಲಕ ಎಚ್. ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.
Kshetra Samachara
10/01/2022 03:50 pm